ವೀರಾಜಪೇಟೆ, ನ. ೧೦: ವೀರಾಜಪೇಟೆ ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಮೈಸೂರು ಅಪೋಲೋ ಆಸ್ಪತ್ರೆಯ ಸಹಯೋಗದೊಂದಿಗೆ ಆಯೋಜಿಸಲಾದ ಹೃದಯ ತಪಾಸಣಾ ಶಿಬಿರವನ್ನು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ವೆಂಕಟೇಶ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಈ ಭಾಗದಲ್ಲಿ ಹೆಚ್ಚಿನ ಮಂದಿ ಬಡವರಿದ್ದು, ಹೃದಯಕ್ಕೆ ಸಂಬAಧಿಸಿದ ಖಾಯಿಲೆಗಳಿಗೆ ಮೈಸೂರಿಗೆ ತೆರಳಬೇಕಿದೆ. ಅದು ತುರ್ತು ಸಮಯದಲ್ಲಿ ಕಷ್ಟಸಾಧ್ಯವಾದುದರಿಂದ ಇಲ್ಲಿಯೇ ಪರೀಕ್ಷೆ ಮಾಡಿಸಿಕೊಳ್ಳಲು ಸಲಹೆ ನೀಡಿದರು. ವೀರಾಜಪೇಟೆ ನಗರದಲ್ಲಿರುವ ತಾಲೂಕು ಆಸ್ಪತ್ರೆಯಲ್ಲಿ ಅಪೋಲೋ ಆಸ್ಪತ್ರೆಯ ಸಹಯೋಗದೊಂದಿಗೆ ಉಚಿತವಾಗಿ ಹೃದಯ ತಪಾಸಣಾ ಶಿಬಿರ ಪ್ರತಿ ತಿಂಗಳ ಎರಡನೇ ಶುಕ್ರವಾರ ಮತ್ತು ನಾಲ್ಕನೇ ಶುಕ್ರವಾರ ನಡೆಯಲಿದೆ ಎಂದು ವೀರಾಜಪೇಟೆ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ವಿಶ್ವನಾಥ ಸಿಂಪಿ ತಿಳಿಸಿದರು. ಈ ಸಂದರ್ಭ ಅಪೋಲೋ ಆಸ್ಪತ್ರೆಯ ವೈದ್ಯರಾದ ಡಾ. ಪ್ರಸಿನ್, ಡಾ. ಮಹಮ್ಮದ್ ಅಲಿ, ಆಯೋಜಕ ರಾಕೇಶ್ ಉತ್ತಪ್ಪ ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶ್ಮಿತ ಇದ್ದರು.