ಕುಶಾಲನಗರ, ನ. ೯: ಕೊಡಗು ಜಿಲ್ಲಾ ನಾಯಕ ಸಂಘದ ನೂತನ ಅಧ್ಯಕ್ಷರಾಗಿ ಕೆ.ಎನ್. ಅಶೋಕ್ ಆಯ್ಕೆಯಾಗಿದ್ದಾರೆ. ಕುಶಾಲನಗರದ ವಾಲ್ಮೀಕಿ ಸಮುದಾಯ ಭವನ ಸಭಾಂಗಣದಲ್ಲಿ ನಡೆದ ಮಹಾ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಗೌರವಾಧ್ಯಕ್ಷರಾಗಿ ಎಂ. ಮಲ್ಲಪ್ಪ, ಉಪಾಧ್ಯಕ್ಷರಾಗಿ ಪಿ.ಟಿ. ಸುರೇಶ್, ಶಿವಾನಂದಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ವೈ.ಟಿ. ಪರಮೇಶ್, ಖಜಾಂಚಿಯಾಗಿ ಆರ್. ಕೃಷ್ಣ, ಸಂಘಟನಾ ಕಾರ್ಯದರ್ಶಿಯಾಗಿ ಕೆ.ಆರ್. ಚಂದ್ರು ಅವರುಗಳನ್ನು ಆಯ್ಕೆ ಮಾಡಲಾಯಿತು. ಆಡಳಿತ ಮಂಡಳಿ ಸದಸ್ಯರಾಗಿ ಎಂ.ಸಿ. ಸಂತೋಷ್, ಆರ್.ಎಂ. ಲಕ್ಷ್ಮಣ್, ಜಗದೀಶ್, ಮಂಜುನಾಥ್, ತಮ್ಮಯ್ಯ, ಪ್ರಕಾಶ್, ಕೆ.ಆರ್. ಮಂಜುಳಾ, ಸುಮಿತ್ರಾ, ಕಾವ್ಯ ಸಂದೀಪ್, ಚಂದನ್ ಕುಮಾರ್, ಪೊನ್ನಂಪೇಟೆ ತಾಲೂಕು ಅಧ್ಯಕ್ಷರಾಗಿ ಪಿ.ಟಿ. ಸುರೇಶ್, ಸೋಮವಾರಪೇಟೆ ತಾಲೂಕು ಅಧ್ಯಕ್ಷರಾಗಿ ಹೆಚ್.ಬಿ. ತಳವಾರ್ ಆಯ್ಕೆಯಾದರು.