ಗೋಣಿಕೊಪ್ಪಲು, ನ.೧೦ : ನಡಿಕೇರಿ ಗ್ರಾಮದ ಶ್ರೀ ಗೋವಿಂದ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಹೈಕೋರ್ಟ್ನ ಹಿರಿಯ ನ್ಯಾಯವಾದಿ ಅಜ್ಜಿಕುಟ್ಟೀರ ಪೊನ್ನಣ್ಣರವರು ರೂ. ೨.೫೦ ಲಕ್ಷ ಮೌಲ್ಯದ ಟೈಲ್ಸ್ ಅನ್ನು ನೀಡಿದ್ದಾರೆ. ಸರಳ ಸಮಾರಂಭದಲ್ಲಿ ಹಿರಿಯರಾದ ಮೂಕಳೇರ ಎಸ್.ಕುಶಾಲಪ್ಪ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ, ಮಾಜಿ ತಾ. ಪಂ.ಸದಸ್ಯ ಸಾಜಿ ಅಚ್ಚುತ್ತನ್, ಕೋಳೆರ ಭಾರತಿ ಮಿದೇರಿರ ನವೀನ್, ಮತ್ರಂಡ ದಿಲ್ಲು, ಮುಕ್ಕಾಟೀರ ಸಂದೀಪ್, ಕರ್ತಮಾಡ ರಮ್ಯ, ಎರ್ಮುಹಾಜಿ ಸೇರಿದಂತೆ ದೇವಸ್ಥಾನ ಸಮಿತಿಯ ಆಡಳಿತ ಮಂಡಳಿಯ ಪ್ರಮುಖರು ಹಾಜರಿದ್ದರು.