ಕಡಂಗ, ನ. ೯: ಲೋಪಮುದ್ರ ಟೀ-ಟ್ವೆಂಟಿ ಅರಪಟ್ಟು ಸಂಘದ ವತಿಯಿಂದ ಕಡಂಗ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಮುಕ್ತ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನ್ಯಾಯವಾದಿ ಎ.ಎಸ್. ಪೊನ್ನಣ್ಣ ಮಾತನಾಡಿ, ಈ ರೀತಿಯ ಕ್ರೀಡಾಕೂಟದಿಂದ ಪರಸ್ಪರ ಸ್ನೇಹ, ಸಹೋದರತೆ ಬೆಳೆಯುತ್ತದೆ ಎಂದರು.

ಕ್ರೀಡಾಕೂಟದಲ್ಲಿ ಕೊಡಗು ಜಿಲ್ಲೆಯಿಂದ ಮಾತ್ರವಲ್ಲದೆ ಮಂಡ್ಯ, ಚಾಮರಾಜನಗರ ಸುಳ್ಯ, ಮೈಸೂರು, ಬೆಂಗಳೂರು ಮುಂತಾದ ಕಡೆಗಳಿಂದ ಕ್ರೀಡಾಪಟುಗಳು ಆಗಮಿಸಿದ್ದರು

೦.೨೨ ಮೀಟರ್ಸ್ ವಿಭಾಗದಲ್ಲಿ ಅಪ್ಪುಮಣಿಯಿಂಡ ಸನ್ನು ಸೋಮಣ್ಣ (ಪ್ರಥಮ), ಬಳಪದ ವರುಣ್ (ದ್ವಿತೀಯ) ಕೊಟ್ಟಂಗಡ ಗೌತಮ್ (ತೃತೀಯ) ಬಹುಮಾನ ಪಡೆದುಕೊಂಡರು.

೧೨ನೇ ಬೋರ್ ೩೦ ಮೀಟರ್ ವಿಭಾಗದಲ್ಲಿ ಬಳಪದ ವರುಣ್ (ಪ್ರಥಮ), ಅಪ್ಪಾಡರಂಡ ದಿನು (ದ್ವಿತೀಯ) ಕಲ್ಲೆಂಗಡ ನವೀನ್ (ತೃತೀಯ) ಬಹುಮಾನ ಪಡೆದರು. ಮುಳಿಯ ಜ್ಯುವೆಲ್ರ‍್ಸ್ ವತಿಯಿಂದ ೧೩ ಶೂಟರ್‌ಗಳಿಗೆ ಬೆಳ್ಳಿ ನಾಣ್ಯಗಳನ್ನು ನೀಡಲಾಯಿತು.

ಸಮಾರೋಪ ಸಮಾರಂಭದಲ್ಲಿ ಸಿಎನ್‌ಸಿ ಸಂಚಾಲಕ ಎನ್.ಯು. ನಾಚಪ್ಪ, ತೇಜು ಜಯರಾಮ್, ಬೊಳಿಯಾಡಿರ ಪ್ರಭು ದೇವಯ್ಯ, ಸಂಘದ ಅಧ್ಯಕ್ಷ ಗಣು ಕುಶಾಲಪ್ಪ, ಸಂಘದ ಸದಸ್ಯರುಗಳಾದ ಮುಕ್ಕಾಟಿರ ಮುದ್ದು, ಪ್ರದೀಪ್ ಮತ್ತು ವಿನೋದ್ ನಾಣಯ್ಯ ಉಪಸ್ಥಿತರಿದ್ದರು.