ಶನಿವಾರಸಂತೆ ನ, ೮: ಉದ್ದೇಶಿತ ಜಾಗದಲ್ಲಿಯೇ ಅಂಬೇಡ್ಕರ್ ಭವನ ನಿರ್ಮಾಣ ಮಾಡಬೇಕೆಂದು ದಲಿತ ಸಂಘರ್ಷ ಸಮಿತಿ ಆಗ್ರಹಿಸಿ ಅಧಿಕಾರಿ ಗಳಿಗೆ ಮನವಿ ಸಲ್ಲಿಸಿದರು. ಶನಿವಾರಸಂತೆ ಹೋಬಳಿಯಲ್ಲಿ ಡಾ|| ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಸರಕಾರದ ವತಿಯಿಂದ ಜಾಗ ಮಂಜೂರಾತಿಯಾಗಿದ್ದು, ಜಿಲ್ಲಾಧಿಕಾರಿಗಳ ಆದೇಶ ದಂತೆ ಬಿದರೂರು ಗ್ರಾಮದಲ್ಲಿ ೨೦ ಸೆಂಟ್ ಜಾಗ ಕಾಯ್ದಿರಿಸಲಾಗಿದೆ. ಆಡಳಿತಾತ್ಮಕ ಪ್ರಕ್ರಿಯೆ ಕೂಡ ಆರಂಭ ಮಾಡ ಲಾಗಿದೆ. ಆದರೆ, ಕೆಲವರು ಭವನ ನಿರ್ಮಾಣಕ್ಕೆ ಅಡ್ಡಗಾಲು ಹಾಕುತ್ತಿದ್ದು, ಉದ್ದೇಶಿತ ಜಾಗ ದಲ್ಲಿಯೇ ಭವನ ನಿರ್ಮಿಸಬೇಕೆಂದು ಗ್ರಾಮಸ್ಥರ ಜೊತೆ ಸಭೆ ನಡೆಸಿ ನಿರ್ಣಯ ಕೈಗೊಂಡು ಬಳಿಕ ಶನಿವಾರಸಂತೆ ನಾಡಕಚೇರಿಯಲ್ಲಿ ಉಪತಹಶೀಲ್ದಾರ್ ಮಂಜುನಾಥ್ ಅವರಿಗೆ ಪ್ರಮುಖರು ಮನವಿ ಸಲ್ಲಿಸಿದರು. ದಸಂಸ ಸಂಚಾಲಕ ಜೆ.ಆರ್. ಪಾಲಾಕ್ಷ, ಪ್ರಮುಖ ಕೆ.ಪಿ. ಜಯಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.