ಮಡಿಕೇರಿ, ನ. ೮: ಇತ್ತೀಚೆಗಷ್ಟೆ ಕೊಡಗಿನಲ್ಲಿ ಪ್ರಥಮ ಬಾರಿಗೆ ರಾಜೀವ್ ಬೋಪಯ್ಯ ಅಧ್ಯಕ್ಷತೆಯ ಪೊನ್ನಂಪೇಟೆ ಕೊಡವ ಸಮಾಜ ಕೊಡವ ವಿವಾಹಗಳ ಅಸಂಪ್ರದಾಯಿಕ ವಿವಾಹ ಹಾಗೂ ಇತರ ಅಂತಹ ಸಮಾರಂಭಗಳಿಗೆ ಕಡಿವಾಣ ಹಾಕಿದ ಬೆನ್ನಲ್ಲೇ ಇದೀಗ ವೀರಾಜಪೇಟೆ ಕೊಡವ ಸಮಾಜವು ಅಂತಹ ವಿವಾಹ ಹಾಗೂ ಅಂತಹ ಸಮಾರಂಭಗಳಿಗೆ ನಿರ್ಬಂಧ ಹೇರಿದೆ. ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ವಾಂಚಿರ ನಾಣಯ್ಯ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ಸಮಾಜದ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಕೆಲವೊಂದು ವಿಶೇಷ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಈ ಸಭೆಯಲ್ಲಿ ಕೊಡವ ಸಮಾಜದ ಆಡಳಿತ ಮಂಡಳಿಯ ೧೫ ಮಂದಿ ನಿರ್ದೇಶಕರುಗಳು, ೩೫೭ ಮಂದಿ ಸದಸ್ಯರುಗಳು ಹಾಜರಿದ್ದು, ಸರ್ವಾನುಮತದಿಂದ ತೀರ್ಮಾನ ಕೈಗೊಳ್ಳಲಾಗಿದೆ. ಈ ತೀರ್ಮಾನಗಳ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ಅಧ್ಯಕ್ಷ ವಾಂಚಿರ ನಾಣಯ್ಯ ಅವರು, ಈ ಕೆಳಗಿನ ವಿವರ ಮಾಹಿತಿ ನೀಡಿದರು.
ಕೊಡವ ಜನಾಂಗದ ವಿವಾಹಗಳಲ್ಲಿ ವೀರಾಜಪೇಟೆ ಕೊಡವ ಸಮಾಜದಲ್ಲಿ ನಡೆಯುವ ವಿವಾಹಗಳಿಗೆ ತಕ್ಷಣದಿಂದಲೇ ಜಾರಿಗೊಳ್ಳುವಂತೆ ಕೆಲವೊಂದು ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ. ಕೊಡವ ಸಂಪ್ರದಾಯ, ಸಂಸ್ಕೃತಿ ಅಚ್ಚಳಿಯದೆ ಉಳಿಯಬೇಕೆನ್ನುವ ಅಚಲ ನಿರ್ಧಾರದಿಂದ ಈ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ವಿವಾಹದ ಸಂದರ್ಭ ವರನು ಗಡ್ಡ ಬಿಟ್ಟಿರಬಾರದು. ಪೂರ್ಣ ರೀತಿಯಲ್ಲಿ ಗಡ್ಡವನ್ನು ತೆಗೆದು ಮಾತ್ರ ವಿವಾಹವಾಗಬಹುದು. ವಿವಾಹದಲ್ಲಿ ಪಾಲ್ಗೊಳ್ಳುವ ಕೊಡವ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ತಲೆಕೂದಲನ್ನು ಕಟ್ಟದೆ ಕೆದರಿಕೊಂಡಿರಬಾರದು. ‘ಶಕ್ತಿ’ಯೊಂದಿಗೆ ಮಾತನಾಡಿದ ಅಧ್ಯಕ್ಷ ವಾಂಚಿರ ನಾಣಯ್ಯ ಅವರು, ಈ ಕೆಳಗಿನ ವಿವರ ಮಾಹಿತಿ ನೀಡಿದರು.
ಕೊಡವ ಜನಾಂಗದ ವಿವಾಹಗಳಲ್ಲಿ ವೀರಾಜಪೇಟೆ ಕೊಡವ ಸಮಾಜದಲ್ಲಿ ನಡೆಯುವ ವಿವಾಹಗಳಿಗೆ ತಕ್ಷಣದಿಂದಲೇ ಜಾರಿಗೊಳ್ಳುವಂತೆ ಕೆಲವೊಂದು ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ. ಕೊಡವ ಸಂಪ್ರದಾಯ, ಸಂಸ್ಕೃತಿ ಅಚ್ಚಳಿಯದೆ ಉಳಿಯಬೇಕೆನ್ನುವ ಅಚಲ ನಿರ್ಧಾರದಿಂದ ಈ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ವಿವಾಹದ ಸಂದರ್ಭ ವರನು ಗಡ್ಡ ಬಿಟ್ಟಿರಬಾರದು. ಪೂರ್ಣ ರೀತಿಯಲ್ಲಿ ಗಡ್ಡವನ್ನು ತೆಗೆದು ಮಾತ್ರ ವಿವಾಹವಾಗಬಹುದು. ವಿವಾಹದಲ್ಲಿ ಪಾಲ್ಗೊಳ್ಳುವ ಕೊಡವ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ತಲೆಕೂದಲನ್ನು ಕಟ್ಟದೆ ಕೆದರಿಕೊಂಡಿರಬಾರದು. ಏಕೆಂದರೆ ಇದು ಯಾವುದೂ ಕೊಡವ ಸಂಸ್ಕೃತಿಗೆ ಪೂರಕವಲ್ಲ. ಜೊತೆಗೆ ಹೂಗುಚ್ಛದ ಮೂಲಕ ಜಲ ಚಿಮ್ಮುವಿಕೆ ಯೊಂದಿಗೆ ಎರಡು ಬಾರಿ ಉಂಟಾಗುವAತಹ ಶಬ್ಧಗಳ ಕಾರ್ಯಕ್ರಮಗಳನ್ನು ಮಾಡುವಂತಿಲ್ಲ. ಏಕೆಂದರೆ, ಸಾವಿನ ಸಂದರ್ಭ ೨ ಗುಂಡು ಹಾರಿಸುವ ಮೂಲಕ ನೀಡುವ ಸಂದೇಶ ದುಃಖದಾಯಕ ವಾಗಿದ್ದು, ಇದು ಶುಭ ಕಾರ್ಯಕ್ರಮಗಳಿಗೆ ಸಮರ್ಪಕವಾಗಿಲ್ಲ. ಕೆಲವು ವಿವಾಹಗಳಲ್ಲಿ ಕೊಡವ ವಾಲಗದ ತಂಡದಿAದ ‘ದೇವಾಟ್’ ನಾದವನ್ನು ಬಾರಿಸಲಾಗುತ್ತದೆ. ಈ ನಾದಕ್ಕೆ ತಕ್ಕುದಾಗಿ ಕುಣಿಯುತ್ತಾರೆ. ಆದರೆ, ಈ ‘ದೇವಾಟ್’ ಕೇವಲ ದೇವಾಲಯಗಳಲ್ಲಿ ದೈವ ಸಮ್ಮುಖದಲ್ಲಿ ಮಾತ್ರ ನಡೆಯುವುದರಿಂದ ವಿವಾಹಗಳಲ್ಲಿ ಇದನ್ನು ಬಳಸಲು, ಅದಕ್ಕೆ ತಕ್ಕ ಕುಣಿಯಲು ಅವಕಾಶವಿಲ್ಲ.
ಶುಭ ವಿವಾಹಗಳಾಗಲೀ, ಸಮುದಾಯದ ಇತರ ಸಮಾರಂಭಗಳಾಗಲಿ
(ಮೊದಲ ಪುಟದಿಂದ) ರಾತ್ರಿ ೧೦ ಗಂಟೆ ಬಳಿಕ ಮುಂದುವರೆಸುವAತಿಲ್ಲ. ಸಾರ್ವಜನಿಕ ಹಿತಾಸಕ್ತಿಯಿಂದ ಈ ನಿರ್ಣಯ ಕೈಗೊಳ್ಳಲಾಗಿದೆ.
ಕೊಡವ ಯುವತಿಯು ಇತರ ಯಾವುದೇ ಜನಾಂಗದ ಯುವಕನನ್ನು ವಿವಾಹವಾಗುವುದಾದರೆ ಯಾವುದೇ ಕಾರಣಕ್ಕೆ ಆ ಯುವಕನು ಕೊಡವ ಜನಾಂಗದ ಸಾಂಪ್ರದಾಯಿಕ ಉಡುಪಾದ ಕುಪ್ಯಚಾಲೆ, ಪೀಚೆಕತ್ತಿ ಹಾಗೂ ಮಂಡೆತುಣಿ ಇವುಗಳನ್ನು ಧರಿಸುವಂತಿಲ್ಲ. ಅಲ್ಲದೆ, ಇಂತಹ ಅನ್ಯಜಾತಿಯ ಯುವಕನನ್ನು ವಿವಾಹವಾಗುವ ಸಂದರ್ಭ ಆ ವಧುವಿನ ತಾಯಿ ತನ್ನ ಮಗಳಿಗೆ ‘ಪತ್ತಾಕ್’ ತೊಡಿಸಬಾರದು.
ಈ ಎಲ್ಲಾ ನಿರ್ಣಯಗಳು ಕೊಡವ ಆಚಾರ- ವಿಚಾರ, ಪದ್ಧತಿಗೆ ಅನ್ವಯವಾಗಿದ್ದು, ವೀರಾಜಪೇಟೆ ಕೊಡವ ಸಮಾಜದಲ್ಲಿ ತಕ್ಷಣದಿಂದಲೇ ಜಾರಿಗೊಳ್ಳಲಿದೆ ಎಂದು ಅಧ್ಯಕ್ಷ ವಾಂಚಿರ ನಾಣಯ್ಯ ಮಾಹಿತಿಯಿತ್ತಿದ್ದಾರೆ.