ಕೂಡಿಗೆ, ನ. ೮: ಇಲ್ಲಿಗೆ ಸಮೀಪದ ಯಡವನಾಡು ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಕಾಡಾನೆಗಳು ಈ ವ್ಯಾಪ್ತಿಯ ಭತ್ತದ ಗದ್ದೆ ಮತ್ತು ಬಾಳೆ, ಸಿಹಿ ಗೆಣಸು ಮತ್ತು ಮರ ಗೆಣಸು ತಿಂದು ತುಳಿದು ನಷ್ಟಪಡಿಸಿವೆ.

ಯಡವನಾಡು ಗ್ರಾಮದ ಉಮೇಶ ರಾಜ್ ಅರಸ್, ಜಲರಾಜ್, ರಾಜಣ್ಣ, ಪ್ರಕಾಶ್ ಸೇರಿದಂತೆ ೧೦ಕ್ಕೂ ಹೆಚ್ಚು ರೈತರ ಗದ್ದೆಗಳಿಗೆ ಹುದುಗೂರು ಮೀಸಲು ಅರಣ್ಯ ಪ್ರದೇಶ ಕಡೆಯಿಂದ ಮತ್ತು ಹಾರಂಗಿ ಹಿನ್ನೀರಿನ ತಟದಲ್ಲಿರುವ ಕಾಡಾನೆಗಳ ಹಿಂಡು ದಾಳಿ ಮಾಡಿ ನಷ್ಟಪಡಿಸಿವೆ. ಸ್ಥಳಕ್ಕೆ ಹುದುಗೂರು ಉಪ ವಲಯ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ.