ಮಡಿಕೇರಿ, ನ. ೮: ಅರಂತೋಡು ಗ್ರಾಮಕ್ಕೆ ಕೊಡಗಿನ ಸೆಸ್ಕಾಂ ಮೂಲಕ ವಿದ್ಯುತ್ ಸರಬರಾಜು ಮಾಡುವಂತೆ ಒತ್ತಾಯಿಸಿ ಅರಂತೋಡು ಗ್ರಾಮಸ್ಥರ ಪರವಾಗಿ ಅಲ್ಲಿನ ಗ್ರಾ.ಪಂ. ಉಪಾಧ್ಯಕ್ಷ ಅಶ್ರಫ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮನವಿ ಸಲ್ಲಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ, ಸುಳ್ಯ ತಾಲೂಕು ಅರಂತೋಡು ಗ್ರಾಮವು ಸುಮಾರು ೫ ಸಾವಿರ ಜನಸಂಖ್ಯೆಯಿAದ ಕೂಡಿದ್ದು, ಬೆಳೆಯುತ್ತಿರುವ ಪಟ್ಟಣವಾಗಿದೆ. ಗ್ರಾಮದಲ್ಲಿ ವಿದ್ಯುತ್ ಸಮಸ್ಯೆಯಿಂದ ಕಚೇರಿ ಕೆಲಸಕ್ಕೆ ಮತ್ತು ಜನರಿಗೆ ತೊಂದರೆಯಾಗುತ್ತಿದೆ. ಈ ಪ್ರದೇಶಕ್ಕೆ ವಿದ್ಯುತ್ ಸಮಸ್ಯೆ ಒಂದು ಶಾಪವಾಗಿ ಪರಿಣಮಿಸಿದೆ. ಅಸಮರ್ಪಕ ವಿದ್ಯುತ್ ಸರಿಪಡಿಸುವಂತೆ ಹಲವಾರು ಬಾರಿ ಜನಪ್ರತಿನಿಧಿಗಳಿಗೆ, ಇಲಾಖಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಗ್ರಾಮದ ನೆರೆಯ ಗ್ರಾಮ ಸಂಪಾಜೆ ಗ್ರಾಮಕ್ಕೆ ಕೊಡಗಿನ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪೆನಿಯಿAದ ಉತ್ತಮ ಗುಣಮಟ್ಟದ ವಿದ್ಯುತ್ ಸರಬರಾಜು ಆಗುತ್ತಿದ್ದು ಪಕ್ಕದಲ್ಲಿರುವ ಅರಂತೋಡು ಗ್ರಾಮವು ಕತ್ತಲೆಯಿಂದ ಕೂಡಿದೆ. ಅರಂತೋಡು ಗ್ರಾಮಕ್ಕೂ ಕೊಡಗಿನ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪೆನಿಯಿAದ ವಿದ್ಯುತ್ ಸರಬರಾಜನ್ನು ಒದಗಿಸಿಕೊಡುವಂತೆ ಲಿಖಿತವಾಗಿ ಮನವಿ ಸಲ್ಲಿಸಿದ್ದಾರೆ.