ಮಡಿಕೇರಿ, ನ. ೮: ಪ್ರಸಕ್ತ ಸಾಲಿನ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಪ್ರೋತ್ಸಾಹ ಧನ ಕಾರ್ಯ ಕ್ರಮದಡಿ ಅರ್ಹ ವಿದ್ಯಾರ್ಥಿಗಳಿಗೆ ಸೌಲಭ್ಯ ಶೀಘ್ರ ತಲುಪಿಸುವ ಸಲುವಾಗಿ ತಾ. ೧೭ ರವರೆಗೆ ‘ವಿದ್ಯಾರ್ಥಿ ವೇತನ ಅಭಿಯಾನ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಪರಿಶಿಷ್ಟ ಜಾತಿಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳು ತಿತಿತಿ.sತಿ. ಞಚಿಡಿ.ಟಿiಛಿ.iಟಿ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ೧ ರಿಂದ ೫ ತರಗತಿಯ ಬಾಲಕರಿಗೆ ರೂ ೧೦೦೦ ಹಾಗೂ ಬಾಲಕಿಯರಿಗೆ ೧೧೦೦ ರೂ., ೬ ರಿಂದ ೭ ತರಗತಿಯ ಬಾಲಕರಿಗೆ ೧೧೫೦ ಮತ್ತು ಬಾಲಕಿಯರಿಗೆ ರೂ. ೧೨೫೦, ೮ನೇ ತರಗತಿಯ ಬಾಲಕರಿಗೆ ರೂ. ೧೨೫೦ ಮತ್ತು ಬಾಲಕಿಯರಿಗೆ ರೂ. ೧೩೫೦, ೯ ಮತ್ತು ೧೦ ತರಗತಿಯ ಬಾಲಕ ಮತ್ತು ಬಾಲಕಿಯರಿಗೆ ರೂ. ೨೨೫೦ ನೀಡಲಾಗುತ್ತದೆ. ಮೆಟ್ರಿಕ್ ನಂತರದ ಅರ್ಹ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕಾಗಿ ವೆಬ್‌ಸೈಟ್ ssಠಿ.ಠಿosಣmಚಿಣಡಿiಛಿ. ಞಚಿಡಿಟಿಚಿಣಚಿಞಚಿ. gov.iಟಿ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ (ಆದಾಯ ಮಿತಿ ೨.೫೦ ಲಕ್ಷ), ವಿದ್ಯಾರ್ಥಿಯ ಬ್ಯಾಂಕ್ ಪುಸ್ತಕದ ಪ್ರತಿ, ಆಧಾರ್ ಕಾರ್ಡ್, ಚಾಲ್ತಿಯಲ್ಲಿರುವ ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ, ಅಂಕಪಟ್ಟಿ, ಇತ್ತೀಚಿನ ಭಾವಚಿತ್ರ, ಆದಾಯ ಮಿತಿ ೨.೫೦ ಲಕ್ಷದಿಂದ ೧೦ ಲಕ್ಷ ರೂ. ಒಳಗಿದ್ದು, ಸಿಇಟಿ ಮೂಲಕ ಎಂಬಿಬಿಎಸ್, ಬಿಡಿಎಸ್. ಬಿಇ, ಬಿಟೆಕ್, ಮತ್ತು ಬಿಆರ್ ಕೋರ್ಸ್ಗಳಿಗೆ ಆಯ್ಕೆ ಯಾಗುವ ವಿದ್ಯಾರ್ಥಿಗಳು ಮಾತ್ರ ಸರ್ಕಾರಿ, ಅನುದಾನಿತ, ಅನುದಾನ ರಹಿತ, ಖಾಸಗಿ ಮತ್ತು ಡೀಮ್ಸ್ ವಿಶ್ವವಿದ್ಯಾನಿಲಯದ ಕಾಲೇಜು, ಸಂಸ್ಥೆಗಳಲ್ಲಿ ಪ್ರವೇಶ ಪಡೆದಿದ್ದಲ್ಲಿ ಅಂತಹ ವಿದ್ಯಾರ್ಥಿಗಳು ಶೇ.೧೦೦ ರಷ್ಟು ಆಯಾಯ ಸಂಸ್ಥೆಗಳಿಗೆ ನಿಗಧಿ ಪಡಿಸಿದ ಶುಲ್ಕ ಪಡೆಯಲು ಅರ್ಹರಾಗಿದ್ದಾರೆ.

ನಗದು ಬಹುಮಾನ: ಎರಡನೇ ಪಿಯುಸಿ ಮತ್ತು ಡಿಪ್ಲೋಮಾ ೨೦ ಸಾವಿರ, ಪದವಿ ಬಿಎ, ಬಿಎಸ್‌ಸಿ, ಬಿ.ಕಾಂ ೨೫ ಸಾವಿರ ರೂ, ಸ್ನಾತಕೋತ್ತರ ಪದವಿ ಎಂಎ, ಎಂಎಸ್‌ಸಿ ೩೦ ಸಾವಿರ ರೂ, ತಾಂತ್ರಿಕ ಪದವಿ, ವೈದ್ಯಕೀಯ ಪದವಿ, ಕೃಷಿ ಮತ್ತು ಪಶು ಸಂಗೋಪನೆ ಪದವಿ ೩೫ ಸಾವಿರ ರೂ, ಎಸ್‌ಎಸ್‌ಎಲ್‌ಸಿ ಶೇ. ೬೦ ರಿಂದ ೭೪.೫ ವರೆಗೆ ೭ ಸಾವಿರ ರೂ, ಶೇ. ೭೫ ಕ್ಕಿಂತ ಮೇಲ್ಪಟ್ಟು ೧೫ ಸಾವಿರ ರೂ ನಗದು ಬಹುಮಾನ ದೊರೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇÃಶಕರ ಕಚೇರಿ ಮಡಿಕೇರಿ ದೂ.ಸಂ. ೦೮೨೭೨-೨೨೫೫೩೧, ಸಹಾಯಕ ನಿರ್ದೇಶಕ ಕಚೇರಿ ಸಮಾಜ ಕಲ್ಯಾಣ ಇಲಾಖೆ ಮಡಿಕೇರಿ ದೂ.ಸಂ.೦೮೨೭೨-೨೨೩೫೫೨, ಮೊ. ೮೮೬೧೩೯೮೧೨೫, ಸಹಾಯಕ ನಿರ್ದೇಶಕ ಕಚೇರಿ ಸಮಾಜ ಕಲ್ಯಾಣ ಇಲಾಖೆ ಸೋಮವಾರಪೇಟೆ ದೂ.ಸಂ. ೦೮೨೭೬-೨೮೧೧೧೫, ಮೊ. ೯೭೪೧೬೨೪೫೭೩, ಸಹಾಯಕ ನಿರ್ದೇಶಕ ಕಚೇರಿ ಸಮಾಜ ಕಲ್ಯಾಣ ಇಲಾಖೆ ಪೊನ್ನಂಪೇಟೆ ೦೮೨೭೪-೨೪೯೪೭೬, ಮೊ. ೯೮೮೦೨೩೨೭೭೩ ಸಂಪರ್ಕಿಸಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್ ಕೋರಿದ್ದಾರೆ.