ಮಡಿಕೇರಿ, ನ. ೭: ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್, ಕೊಡಗು ಶಾಖೆ, ಸೇವಾ ಇಂಟರ್‌ನ್ಯಾಷನಲ್ ಭಾರತ್, ಬೆಂಗಳೂರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ, ಕೊಡಗು ಜಿಲ್ಲೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಮೂರ್ನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ಟೆಮ್ ಕಿಟ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಬೆಂಗಳೂರಿನ ಸೇವಾ ಇಂಟರ್‌ನ್ಯಾಷನಲ್ ಭಾರತ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿಂದುಮಾಧವ್ ಕೆರೂರ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಸೇವಾ ಇಂಟರ್‌ನ್ಯಾಷನಲ್ ಭಾರತ್ ಸಂಸ್ಥೆಯು ಸ್ಟೆಮ್ ಕಿಟ್ ವಿತರಣೆ, ಸರ್ಕಾರಿ ಶಾಲಾ ಶೌಚಾಲಯ ಕಟ್ಟಡ ದುರಸ್ತಿ ಮತ್ತು ಯುವಕ ಯುವತಿಯರಿಗೆ ವೃತ್ತಿ ತರಬೇತಿ ಕಾರ್ಯಕ್ರಮಗಳನ್ನು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥೆ ಜೊತೆಗೂಡಿ ನಡೆಸುತ್ತಿದ್ದು, ಇದರಿಂದ ಅನೇಕರು ಪ್ರಯೋಜನವನ್ನು ಪಡೆದುಕೊಂಡಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥೆಯ ಖಜಾಂಚಿ ಡಾ. ಚಂದ್ರಶೇಖರ್ ಕೆ.ಎನ್. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಕೃಷ್ಣಪ್ಪ, ವೆಂಕಟೇಶ್, ಮೂರ್ನಾಡು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಕೆ.ಪಿ. ಗುರುರಾಜ್, ಎಸ್.ಡಿ.ಎಂ.ಸಿ. ಅಧ್ಯಕ್ಷೆ ಜಯಂತಿ ಹೆಚ್.ವಿ. ಮತ್ತು ಎಸ್.ವಿ.ವೈ.ಎಂ. ಸಂಸ್ಥೆಯ ಅಂಕಾಚಾರಿ ಹಾಗೂ ಇತರರಿದ್ದರು.