ಮಡಿಕೇರಿ, ನ. ೬: ಬಿಟ್ಟಂಗಾಲ ಗ್ರಾ.ಪಂ. ವ್ಯಾಪ್ತಿಯ ಬಾಳುಗೋಡು ಅಂಬಟ್ಟಿ ಗ್ರಾಮದ ವಾರ್ಡ್ ಸಭೆ ತಾ. ೯ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಪಂ. ಸದಸ್ಯೆ ಎಂ.ಟಿ. ಮಾಚಮ್ಮ ಅಧ್ಯಕ್ಷತೆಯಲ್ಲಿ ಕಂಡಿಮಕ್ಕಿ ಕಡಕೊಲ್ಲಿ ಸಮುದಾಯ ಭವನದಲ್ಲಿ ನಡೆಯಲಿದೆ. ಬಿಟ್ಟಂಗಾಲ ಗ್ರಾಮದ ವಾರ್ಡ್ ಸಭೆ ತಾ. ೧೦ ರಂದು ಬೆ. ೧೦.೩೦ ಗಂಟೆಗೆ ಪಂ. ಸದಸ್ಯೆ ಕೆ.ಜಿ. ಪದ್ಮಾವತಿ ಅಧ್ಯಕ್ಷತೆಯಲ್ಲಿ ಬಿಟ್ಟಂಗಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆಯಲಿದೆ.

ನಾಂಗಾಲ ಗ್ರಾಮದ ವಾರ್ಡ್ ಸಭೆ ತಾ. ೧೦ ರಂದು ಅಪರಾಹ್ನ ೨.೩೦ ಪಂ. ಸದಸ್ಯ ಸಿ.ಎಂ. ಕಾವೇರಪ್ಪ ಅಧ್ಯಕ್ಷತೆಯಲ್ಲಿ ನಾಂಗಾಲ ಮಹಿಳಾ ಸಮಾಜ ಸಭಾಂಗಣದಲ್ಲಿ ನಡೆಸಲಾಗುವುದು.

ಕಂಡAಗಾಲ ಗ್ರಾಮದ ವಾರ್ಡ್ ಸಭೆ ತಾ. ೧೧ ರಂದು ಬೆ. ೧೦.೩೦ ಗಂಟೆಗೆ ಪಂ. ಸದಸ್ಯ ಎಂ.ಟಿ. ಸುಬ್ಬಯ್ಯ ಅಧ್ಯಕ್ಷತೆಯಲ್ಲಿ ಕಂಡAಗಾಲ ಸಹಕಾರ ಭವನದ ಸಭಾಂಗಣದಲ್ಲಿ ನಡೆಯಲಿದೆ.

ವಿ. ಬಾಡಗ ಗ್ರಾಮದ ವಾರ್ಡ್ ಸಭೆ ತಾ. ೧೧ ರಂದು ಅಪರಾಹ್ನ ೨.೩೦ ಗಂಟೆಗೆ ಪಂ. ಸದಸ್ಯ ಕೆ.ಇ. ಉತ್ತಪ್ಪ ಅಧ್ಯಕ್ಷತೆಯಲ್ಲಿ ವಿ.ಬಾಡಗ ಗ್ರಾಮದ ಕೆಎಂಸಿ ಸಭಾಂಗಣದಲ್ಲಿ ನಡೆಸಲಾಗುವುದು.