ನಾಪೋಕ್ಲು, ನ. ೬: ಕುಂಜಿಲ-ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕುಂಜಿಲ, ಯವಕಪಾಡಿ, ಮರಂದೋಡ ಮತ್ತು ನಾಲಡಿ ಗ್ರಾಮಗಳ ೨೦೨೧-೨೨ನೇ ಸಾಲಿನ ಗ್ರಾಮ ಸಭೆಯು ತಾ. ೯ ರಂದು ಪೂರ್ವಾಹ್ನ ೧೧ ಗಂಟೆಗೆ ಪಂಚಾಯಿತಿ ಆವರಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲಿಯಂಡ ಅಯ್ಯಪ್ಪ ಸಂಪನ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಪಂಚಾಯಿತಿ ಪ್ರಕಟಣೆ ತಿಳಿಸಿದೆ.