ಮುಳ್ಳೂರು, ನ. ೭: ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಕೊಡ್ಲಿಪೇಟೆ ಶಾಖೆಯ ಡಿ.ಸಿ.ಸಿ. ಬ್ಯಾಂಕ್‌ನಲ್ಲಿ ನೂತನವಾಗಿ ಸ್ಥಾಪಿಸಿರುವ ಎ.ಟಿ.ಎಂ. ಘಟಕವನ್ನು ಉದ್ಘಾಟಿಸಲಾಯಿತು.
ಜಿಲ್ಲಾ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಕೆ.ಪಿ. ಬಾಂಡ್ ಗಣಪತಿ ಎಟಿಎಂ ಯಂತ್ರಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿ, ಕೊಡಗು ಜಿಲ್ಲಾ ಸಹಕಾರ ಬ್ಯಾಂಕ್ ವತಿಯಿಂದ ಎ.ಟಿ.ಎಂ. ಪರ್ವ ಪ್ರಾರಂಭಿಸಲಾಗಿದ್ದು ಈಗಾಗಲೇ ಕೊಡ್ಲಿಪೇಟೆ, ಅಮ್ಮತ್ತಿ ಸೇರಿದಂತೆ ಜಿಲ್ಲೆಯ ೧೧ ಡಿ.ಸಿ.ಸಿ. ಬ್ಯಾಂಕ್ ಶಾಖೆಗಳಲ್ಲಿ ಎಟಿಎಂ ಘಟಕಗಳನ್ನು ಸ್ಥಾಪಿಸಿರುವ ಮೂಲಕ ಗ್ರಾಹಕರಿಗಾಗಿ ಈ ಸೌಲಭ್ಯವನ್ನು ಲಭ್ಯ ಮಾಡಿಕೊಟ್ಟಿದ್ದೇವೆ ಎಂದರು.
ಕೇAದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಬಿ.ಕೆ. ಚಿಣ್ಣಪ್ಪ ಮಾತನಾಡಿ, ಕೊಡ್ಲಿಪೇಟೆ ಡಿ.ಸಿ.ಸಿ. ಬ್ಯಾಕ್ ಶಾಖೆಯಲ್ಲಿ ಈ ಭಾಗದ ರೈತರು ಮತ್ತು ಸಹಕಾರಿಗಳು, ಗ್ರಾಹಕರು ಠೇವಣಿ, ಸಾಲ ಸೌಲಭ್ಯದ ವ್ಯವಹಾರ ನಡೆಸುತ್ತಿದ್ದು, ಬ್ಯಾಂಕಿನ ಪ್ರಗತಿಗಾಗಿ ಗ್ರಾಹಕರು ಮತ್ತು ಕೃಷಿಕರು ಸಹಕರಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಎಸ್.ಬಿ. ಭರತ್‌ಕುಮಾರ್, ಪ್ರಧಾನ ವ್ಯವಸ್ಥಾಪಕ ಕೆ.ಕೆ. ಪೂವಯ್ಯ, ಪ್ರಮುಖ ಪಿ.ಎಸ್. ಗಣಪತಿ, ಕೊಡ್ಲಿಪೇಟೆ ಶಾಖೆಯ ವ್ಯವಸ್ಥಾಪಕ ವೆಂಕಟೇಶ್, ಸಹಾಯಕ ವ್ಯವಸ್ಥಾಪಕ ಬಲರಾಂ, ಸಿಬ್ಬಂದಿ ಲಲಿತಾಕುಮಾರಿ ಕೊಡ್ಲಿಪೇಟೆ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ತಮ್ಮಯ್ಯ, ಎಪಿಸಿಎಂಎಸ್ ಶಂಭುಲಿAಗಪ್ಪ ಸಹಕಾರಿ ಸಂಸ್ಥೆಯ ಪ್ರಮುಖರು ಹಾಜರಿದ್ದರು. - ಭಾಸ್ಕರ್ ಮುಳ್ಳೂರು