ಕೂಡಿಗೆ, ನ. ೬: ಹಾರಂಗಿ ಅಣೆಕಟ್ಟೆಯ ಬಲದಂಡೆ ನಾಲೆ ತಟದಲ್ಲಿ ವಾಸಿಸುತ್ತಿರುವ ೨೦ ರೈತ ಕುಟುಂಬಗಳಿಗೆ ಸಮರ್ಪಕವಾದ ರಸ್ತೆ ವ್ಯವಸ್ಥೆಯಿಲ್ಲದೆ ಸಮಸ್ಯೆಯಾಗಿದೆ. ಅಣೆಕಟ್ಟೆ ನಿರ್ಮಾಣವಾದಂದಿನಿAದಲೂ ಅಭಿವೃದ್ಧಿ ಕಾಣದ ಗುಂಡಿಮಯ ಕೆಸರು ರಸ್ತೆ ಮೇಲಿನ ಸಂಚಾರ ಸವಾರರಿಗೆ ಸವಾಲಾಗಿ ಪರಿಣಮಿಸಿದೆ.

ಭುವನಗಿರಿ ಗ್ರಾಮದ ಮೂಲಕ ಹಾದುಹೋಗಿರುವ ಹಾರಂಗಿ ಬಲದಂಡೆ ನಾಲೆಯ ರೆಗ್ಯುಲೇಟರ್ ಘಟಕದಿಂದ ಭುವನಗಿರಿ-ಸೀಗೆಹೊಸೂರು ಮಾರ್ಗದ ಎರಡು ಕಿ.ಮೀ. ಉದ್ದದ ಕಡಿದಾದ ಮಣ್ಣಿನ ರಸ್ತೆಯಿದೆ. ಯಾವುದೇ ರೀತಿಯಲ್ಲಿ ಅಭಿವೃದ್ಧಿ ಕಾಣದ ಈ ರಸ್ತೆ ಮೂಲಕ ರೈತ ಕುಟುಂಬಗಳು ಸಂಚರಿಸಬೇಕಿದೆ. ತಾವು ಬೆಳೆದ ಬೆಳೆಗಳನ್ನು ಸಾಗಿಸಲು ಇದೇ ರಸ್ತೆಯನ್ನು ಅವಲಂಭಿಸಲಾಗಿದೆ. ಮೊದಲೇ ಕಡಿದಾದ ಮಣ್ಣಿನ ರಸ್ತೆ ಸಂಪೂರ್ಣ ಗುಂಡಿ ಬಿದ್ದಿದ್ದು ಮಳೆಯಿಂದ ಬೃಹತ್ ಹೊಂಡಗಳು ಸೃಷ್ಠಿಯಾಗಿ ಕೆಸರುಮಯವಾಗಿದೆ. ಇದೇ ರಸ್ತೆಯಲ್ಲಿ ರೈತ ಮಹಿಳೆಯರು, ವೃದ್ಧರು, ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಸಂಚರಿಸಬೇಕಿದೆ. ದ್ವಿಚಕ್ರ ವಾಹನಗಳು ಸ್ವಲ್ಪ ನಿಯಂತ್ರಣ ತಪ್ಪಿದರೂ ಪಕ್ಕದಲ್ಲಿನ ತುಂಬಿ ಹರಿಯುತ್ತಿರುವ ನಾಲೆಗೆ ಬೀಳುವ ಅಪಾಯ ಹೆಚ್ಚಿದೆ.

ಸಂಬAಧಿಸಿದ ಇಲಾಖೆಯವರು ಸಮರ್ಪಕವಾದ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕೆAದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.