ನಾಪೋಕ್ಲು, ನ. ೭: ಚೆಯ್ಯಂಡಾಣೆಯ ಲಕ್ಷಿö್ಮ ಮಹಿಳಾ ಸಮಾಜದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಮಾರ್ ಮೇಕೇರಿ ಅವರಿಗೆ ಸನ್ಮಾನ ಮಾಡಲಾಯಿತು.

ನಿವೃತ್ತ ಪೊಲೀಸ್ ಸಿಬ್ಬಂದಿ ಪೊಕ್ಕೋಳಂಡ್ರ ಪ್ರಕಾಶ್ ಕೊರೊನಾಕ್ಕೆ ತುತ್ತಾಗಿ ತೀವ್ರ ಅಸ್ವಸ್ಥಗೊಂಡಿದ್ದ ಸಂದರ್ಭದಲ್ಲಿ ಹಿಂದೂ ಜಾಗರಣಾ ವೇದಿಕೆಯ ಪ್ರಚಾರಕ ಪ್ರಮುಖ್ ಕುಮಾರ್ ಮೇಕೇರಿ ಅವರು ಪ್ಲಾಸ್ಮಾ ನೀಡಿ ಜೀವ ಉಳಿಸಲು ನೆರವಾಗಿದ್ದರು. ಇವರನ್ನು ಚೆಯ್ಯಂಡಾಣೆಯ ಹಿಂದೂ ಜಾಗರಣಾ ವೇದಿಕೆ ಹಾಗೂ ಹಿಂದೂ ಸುರಕ್ಷಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಶಾನುಭೋಗರ ಎಂ. ನಾರಾಯಣಮೂರ್ತಿ ಶಾಲು ಹೊದಿಸಿ ಗೌರವಿಸಿದರು.

ಈ ಸಂದರ್ಭ ಹಿಂದೂ ಜಾಗರಣಾ ವೇದಿಕೆಯ ದಕ್ಷಿಣ ಪ್ರಾಂತ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ. ಉಲ್ಲಾಸ, ಯುವ ವಾಗ್ಮಿ ಹೋರಾಟಗಾರ್ತಿ ಹಾರಿಕ ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜೀತ್ ಕುಕ್ಕೇರ, ಹಿರಿಯರಾದ ಮಚ್ಚಂಡ ರಾಮು ಮುದ್ದಯ್ಯ, ಹಿಂದೂ ಸಂಘಟನೆಯ ಪ್ರಮುಖರಾದ ಪವನ್ ತೋಟಂಬೈಲು, ವೇದಿಕೆಯ ಅಧ್ಯಕ್ಷ ಕುಕ್ಕೆಮನೆ ಆರ್, ನಾರಾಯಣ ಮೂರ್ತಿ, ಉಪಾಧ್ಯಕ್ಷ ಬಿಳಿಯಂಡ್ರ ಶರಣು, ಚೆರುವಾಳಂಡ ರಾಕೇಶ್ ಸುಬ್ಬಯ್ಯ, ಪ್ರಧಾನ ಕಾರ್ಯದರ್ಶಿ ಸುಧಿ ಮಕ್ಕಿಮನೆ, ಕಾರ್ಯದರ್ಶಿಗಳಾದ ಎನ್.ಜಿ.

ವಿವೇಕ್, ಸಿ.ಸಿ. ನವಿನ್ ಖಜಾಂಚಿ ತೋಟಂಬೈಲ್ ಪವನ್, ಪೊಕ್ಕೋಳಂಡ್ರ ದನೋಜ್ ಹಾಗೂ ಹಿಂದೂಪರ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಸದಸ್ಯರು ಉಪಸ್ಥಿತರಿದ್ದರು.