ಮಡಿಕೇರಿ, ನ. ೭ : ತಮಗೆ ತಿಳಿದೋ ತಿಳಿಯದೆಯೋ ಅಪರಾಧ ಕೃತ್ಯಗಳಲ್ಲಿ ಭಾಗಿಗಳಾಗಿ ಜೈಲುವಾಸಿ ಗಳಾಗಿರುವ ಖೈದಿಗಳ ಬದುಕು ಹಸನುಗೊಳಿಸಲು ರಾಜ್ಯ ಸರ್ಕಾರ ಯೋಜನೆಯೊಂದನ್ನು ರೂಪಿಸಿದೆ. ಈ ಯೋಜನೆಯ ಮೂಲಕ ಜೈಲು ಗಳಲ್ಲಿರುವ ಖೈದಿಗಳು, ವಿಚಾರಧೀನರು ವಿದ್ಯಾಭ್ಯಾಸ ಪಡೆಯುವುದಲ್ಲದೆ ಪದವಿ, ಸ್ನಾತಕೋತ್ತರ ಪದವಿಯನ್ನು ಕೂಡ ಪಡೆಯಲು ಯೋಜನೆ ರೂಪಿಸಲಾಗಿದೆ.

ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯು ವಯಸ್ಕ ಶಿಕ್ಷಣ ನಿರ್ದೇಶನಾಲಯದ ಸಹಯೋಗದೊಂದಿಗೆ ಕಲಿಕೆಯಿಂದ ಬದಲಾವಣೆ ಎಂಬ ಸಾಕ್ಷರತಾ ಕಾರ್ಯಕ್ರಮವನ್ನು ಕಳೆದ ನವೆಂಬರ್ ಒಂದರಿAದ ರಾಜ್ಯಾದ್ಯಂತ ಎಲ್ಲಾ ಕಾರಾಗೃಹಗಳಲ್ಲೂ ಜಾರಿಗೊಳಿಸಿದೆ. ಈ ಯೋಜನೆಯಡಿಯಲ್ಲಿ ಅಕ್ಷರಸ್ಥ ಖೈದಿಗಳಿಗೆ ವಯಸ್ಕ ಶಿಕ್ಷಣ ಇಲಾಖೆಯು ತರಬೇತಿ ನೀಡಿ ಅವರನ್ನು ಅನಕ್ಷರಸ್ಥ ಖೈದಿಗಳಿಗೆ ಅಕ್ಷರ ಕಲಿಸಲು ನಿಯೋಜಿಸ ಲಾಗುತ್ತದೆ.

ಈಗಾಗಲೇ ಬಾಳಿಗೆ ಬೆಳಕು ಎಂಬ ೨೪ ಅಧ್ಯಾಯಗಳು ಇರುವ ಪಠ್ಯ ಪುಸ್ತಕವನ್ನೂ ಇದಕ್ಕಾಗಿ ಸಿದ್ಧಪಡಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಮಡಿಕೇರಿ ಕಾರಾಗೃಹದ ಜೈಲರ್ ಮತ್ತು ಪದ ನಿಮಿತ್ತ ಸೂಪರಿಂಟೆAಡೆAಟ್ ರವಿ ಎಂ. ಬಂಡಿವಡ್ಡರ ಅವರು ಪ್ರಸ್ತುತ ಜೈಲಿನಲ್ಲಿ ೧೨೬ ವಿಚಾರಣಾಧೀನ ಖೈದಿಗಳಿದ್ದು ಇವರಲ್ಲಿ ೧೯ ಮಂದಿ ಅನಕ್ಷರಸ್ಥ ಖೈದಿಗಳು ಎಂದು ತಿಳಿಸಿದರು. ಈಗಾಗಲೇ ವಯಸ್ಕ ಶಿಕ್ಷಣ ಅಧಿಕಾರಿಗಳು ಜೈಲಿಗೆ ಭೇಟಿ ನೀಡಿದ್ದು ಅನಕ್ಷರಸ್ಥರಿಗೆ ಶಿಕ್ಷಣ ನೀಡಲು ತಯಾರಿ ಮಾಡಿಕೊಳ್ಳ ಲಾಗಿದ್ದು ಶೀಘ್ರವೇ ಪಾಠಗಳನ್ನು ಆರಂಭಿಸಲಾಗುವುದು ಎಂದರು. ನಿತ್ಯ ಎರಡು ಘಂಟೆಗಳ ಕಾಲ ಖೈದಿಗಳಿಗೆ ಪಾಠ ಹೇಳಿಕೊಡುವಂತೆ ಮೇಲಧಿಕಾರಿಗಳಿಂದ ನಿರ್ದೇಶನ ಬಂದಿದ್ದು ಇವರಿಗೆ ಮುಂದಿನ ಮಾರ್ಚ್ ತಿಂಗಳಿನಲ್ಲಿ ಪರೀಕ್ಷೆಯೂ ನಡೆಯಲಿದೆ ಎಂದು ಅವರು ತಿಳಿಸಿದರು. ಪ್ರತೀ ೧೦ ಖೈದಿಗಳಿಗೆ ಒಬ್ಬ ಬೋಧಕರನ್ನು ನಿಯೋಜಿಸ ಲಾಗುವುದು ಎಂದು ಅವರು ತಿಳಿಸಿದರು.

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಈ ವಿನೂತನ ಯೋಜನೆಯಿಂದ ಖೈದಿಗಳು ಅಕ್ಷರ ಕಲಿಯುವುದೇ ಅಲ್ಲದೆ ನ್ಯಾಷನಲ್ ಇಸ್ಸಿ÷್ಟಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (ಓIಔS) ಮೂಲಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಬರೆಯಬಹುದಾಗಿದೆ. ಅಷ್ಟೇ ಅಲ್ಲ ಇಂದಿರಾ ಗಾಂಧಿ ನ್ಯಾಷನಲ್ ಓಪನ್ ಯೂನಿವರ್ಸಿಟಿ (IಉಓಔU) ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಏSಔU ) ಮೂಲಕ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನೂ

(ಮೊದಲ ಪುಟದಿಂದ) ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ವಿದ್ಯಾಭ್ಯಾಸ ವಂಚಿತರಾಗುವುದು ತಪ್ಪಲಿದೆ ಅಲ್ಲದೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲೂ ಸಹಕಾರಿ ಆಗಲಿದೆ.

ಈಗ ಮಡಿಕೇರಿ ಜೈಲಿನಲ್ಲಿ ೨೭೫ ಖೈದಿಗಳನ್ನು ಇಡುವ ಸಾಮರ್ಥ್ಯ ಇದ್ದು ಒಟ್ಟು ೪೦ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ವೀರಾಜಪೇಟೆ ಉಪ ಬಂಧೀಖಾನೆ ನಿರ್ಮಾಣ ಹಂತದಲ್ಲಿರುವುದರಿAದ ಅಲ್ಲಿನ ವಿಚಾರಣಾಧೀನರನ್ನೂ ಮಡಿಕೇರಿಗೆ ಸ್ಥಳಾಂತರಿಸಲಾಗಿದೆ ಎಂದು ರವಿ ತಿಳಿಸಿದರು. - ಕೋವರ್ ಕೊಲ್ಲಿ ಇಂದ್ರೇಶ್