ಸೋಮವಾರಪೇಟೆ, ನ. ೭: ಪ್ರವಾಸಿತಾಣವಾಗಿ ಗುರುತಿಸ ಲ್ಪಡುತ್ತಿರುವ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟೆಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಮಾದಾಪುರ-ಗರ್ವಾಲೆ-ಕೋಟೆಬೆಟ್ಟ ರಸ್ತೆಯಲ್ಲಿ ಇಂದು ಮಧ್ಯಾಹ್ನ ದಿಢೀರ್ ಬೆಂಕಿ ಕಾಣಿಸಿಕೊಂಡು, ಪ್ರವಾಸಿಗರ ಸಹಿತ ಸ್ಥಳೀಯರನ್ನು ಆತಂಕಕ್ಕೆ ತಳ್ಳಿದ ಘಟನೆ ವರದಿಯಾಗಿದೆ.

ಮಾದಾಪುರ-ಗರ್ವಾಲೆ ಸಂಪರ್ಕ ರಸ್ತೆಯ ಶಿರಂಗಳ್ಳಿ-ಗರ್ವಾಲೆ ಗ್ರಾಮದ ನಡುವೆ ಇರುವ ಸೇತುವೆ ಬಳಿಯಲ್ಲಿ ಇಂದು ಮಧ್ಯಾಹ್ನ ೧ ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ.

ಯಾರೋ ಕಿಡಿಗೇಡಿಗಳು ರಸ್ತೆಯ ಮಧ್ಯೆ ನಾಲ್ಕೆöÊದು ಟಯರ್‌ಗಳನ್ನಿಟ್ಟು ಬೆಂಕಿ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ. ಬೆಂಕಿಯಿAದಾಗಿ ರಸ್ತೆಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡಿದ್ದು, ಪ್ರವಾಸಿಗರ ಸಹಿತ ಸ್ಥಳೀಯರು ಕೆಲಕಾಲ ಭಯಭೀತರಾಗಿದ್ದಾರೆ.

ತಕ್ಷಣ ಮಾದಾಪುರ ಪೊಲೀಸ್ ಉಪ ಠಾಣೆಗೆ ಮಾಹಿತಿ ನೀಡಿದ ಮೇರೆ ಸ್ಥಳಕ್ಕಾಗಮಿಸಿದ ಸಿಬ್ಬಂದಿಗಳಾದ ಮಂಜುನಾಥ್, ರವಿಕಾಂತ್ ಅವರುಗಳು ಸ್ಥಳೀಯರ ಸಹಕಾರದಿಂದ ಬೆಂಕಿಯನ್ನು ನಂದಿಸಿ, ವಾಹನಗಳ

(ಮೊದಲ ಪುಟದಿಂದ) ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಭಾನುವಾರವಾದ್ದರಿಂದ ಕೋಟೆಬೆಟ್ಟಕ್ಕೆ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರ ವಾಹನಗಳು ತೆರಳುತ್ತಿದ್ದವು. ಇಂತಹ ಸಂದರ್ಭದಲ್ಲಿ ರಸ್ತೆ ಮಧ್ಯೆ ಕಿಡಿಗೇಡಿಗಳು ಬೆಂಕಿ ಹಾಕಿ ದುರ್ವರ್ತನೆ ತೋರಿದ್ದು, ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಕೋಟೆಬೆಟ್ಟದ ಕಿತ್ತಾಟ ಕಾರಣವೇ?: ರಸ್ತೆ ಮಧ್ಯೆ ದಿಡೀರ್ ಬೆಂಕಿ ಕಾಣಿಸಿಕೊಂಡ ಘಟನೆಯ ಹಿಂದೆ ಕೋಟೆಬೆಟ್ಟದ ಬಗ್ಗೆ ನಡೆಯುತ್ತಿರುವ ಕಿತ್ತಾಟ ಕಾರಣವೇ? ಎಂಬ ಸಂಶಯ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಗರ್ವಾಲೆ ಗ್ರಾಮಾಭಿವೃದ್ದಿ ಸಮಿತಿಯ ನೇತೃತ್ವದಲ್ಲಿ ಶ್ರೀ ಬೊಟ್ಲಪ್ಪ ಈಶ್ವರ ದೇವಾಲಯ ಸಮಿತಿಯಿಂದ ತಪಾಸಣಾ ಗೇಟ್ ನಿರ್ಮಿಸಿ, ಪ್ರವಾಸಿಗರಿಂದ ಶುಲ್ಕ ವಸೂಲಿ ಮಾಡಲಾಗುತ್ತಿದೆ.

ಇದರೊಂದಿಗೆ ಕ್ಷೇತ್ರದ ಸುತ್ತಲೂ ಸ್ವಚ್ಛತೆ, ಪ್ರವಾಸಿಗರ ಮೇಲೆ ನಿಗಾ ವಹಿಸಲಾಗುತ್ತಿದ್ದು, ಕ್ಷೇತ್ರದ ಪಾವಿತ್ರö್ಯತೆಗೆ ಧಕ್ಕೆಯಾಗದಂತೆ ಕ್ರಮವಹಿಸಲಾಗಿದೆ. ಇದು ಖಾಸಗಿಯಾಗಿ ನಡೆಯುತ್ತಿರುವುದರಿಂದ ಸ್ಥಳೀಯ ಗ್ರಾಮ ಪಂಚಾಯಿತಿ ಅಥವಾ ಪ್ರವಾಸೋದ್ಯಮ ಇಲಾಖೆಗೆ ವಹಿಸಿ, ಸೂಕ್ತ ಮೂಲಭೂತ ಸೌಕರ್ಯಗಳನ್ನು ಅಳವಡಿಸಿ ಕೋಟೆಬೆಟ್ಟವನ್ನು ಮಾದರಿ ಪ್ರವಾಸಿ ತಾಣವನ್ನಾಗಿ ರೂಪಿಸಬೇಕೆಂದು ಗ್ರಾ.ಪಂ. ವ್ಯಾಪ್ತಿಯ ಶಿರಂಗಳ್ಳಿ ಗ್ರಾಮದ ಹಲವರು ಆಗ್ರಹಿಸುತ್ತಲೇ ಬಂದಿದ್ದಾರೆ.

ಈ ಬಗ್ಗೆ ಈಗಾಗಲೇ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿ.ಪಂ. ಸೇರಿದಂತೆ ಜಿಲ್ಲಾಧಿಕಾರಿಗಳ ಕಚೇರಿಗೂ ಮನವಿಗಳು ಸಲ್ಲಿಕೆಯಾಗಿದ್ದು, ಶಾಸಕರ ಉಪಸ್ಥಿತಿಯಲ್ಲಿ ಎರಡೂ ಬಣಗಳ ನಡುವೆ ಸಭೆಯೂ ನಡೆದಿದೆ.

ಆದರೂ ಸಮಸ್ಯೆಗೆ ಪರಿಹಾರ ದೊರಕಿಲ್ಲ. ಈ ನಡುವೆ ಗ್ರಾಮ ಪಂಚಾಯಿತಿಯಿAದ ಕೋಟೆಬೆಟ್ಟ ಸಂಪರ್ಕ ರಸ್ತೆಯಲ್ಲಿ ಫಲಕ ಅಳವಡಿಸಿದ್ದು, ಇದರಲ್ಲಿ ಯಾವುದೇ ಶುಲ್ಕ ವಸೂಲಾತಿ ಮಾಡದಂತೆ ಸೂಚನೆ ನೀಡಲಾಗಿತ್ತು. ಈ ಫಲಕವನ್ನು ಕೆಲವರು ಕಿತ್ತು ಎಸೆದಿದ್ದಾರೆ. ಕೋಟೆಬೆಟ್ಟದ ಶುಲ್ಕ ವಸೂಲಾತಿ ಬಗ್ಗೆ ಉಂಟಾಗಿರುವ ಪರ ವಿರೋಧ ಅಭಿಪ್ರಾಯ ತಾರ್ಕಿಕ ಹಂತಕ್ಕೆ ಈವರೆಗೆ ಬಂದಿಲ್ಲ.

ಬೂದಿಮುಚ್ಚಿದ ಕೆಂಡದAತಿರುವ ಈ ಘಟನಾವಳಿಯ ಮುಂದುವರೆದ ಭಾಗವಾಗಿ ಇಂದು ಪ್ರವಾಸಿಗರು ತೆರಳುವ ಸಾರ್ವಜನಿಕ ರಸ್ತೆಯ ಮೇಲೆ ಬೆಂಕಿ ಹಾಕಲಾಗಿದೆ ಎಂಬ ಚರ್ಚೆಗಳು ಗ್ರಾಮದಲ್ಲಿ ನಡೆಯುತ್ತಿದೆ. ಒಟ್ಟಾರೆ ಬಣಗಳ ನಡುವೆ ಉದ್ಬವವಾಗಿರುವ ಈ ಸಮಸ್ಯೆಯನ್ನು ಗ್ರಾಮಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ಸ್ಥಳೀಯಾಡಳಿತಗಳು, ಜನಪ್ರತಿನಿಧಿಗಳು, ಅಧಿಕಾರಿ ವರ್ಗ ತುರ್ತು ಗಮನಹರಿಸಿ ಜಿದ್ದಾಜಿದ್ದಿಯನ್ನು ಬಗೆಹರಿಸುವ ಮೂಲಕ ತಿಳಿಯಾದ ವಾತಾವರಣ ನಿರ್ಮಿಸಬೇಕಿದೆ.