ಕುಶಾಲನಗರ ನ.೪: ಕೊಣನೂರು -ಮಾಕುಟ್ಟ ರಾಜ್ಯ ಹೆದ್ದಾರಿಯ ಗುಡ್ಡೆಹೊಸೂರು- ಕಬ್ಬಿನಗದ್ದೆ ವ್ಯಾಪ್ತಿಯ ರಸ್ತೆ ಇದೀಗ ವಾಹನಗಳ ಸಂಚಾರಕ್ಕೆ ಮುಕ್ತವಾಗಿದೆ.
ಲೋಕೋಪಯೋಗಿ ಇಲಾಖೆ ವತಿಯಿಂದ ಈ ವ್ಯಾಪ್ತಿಯ ರಸ್ತೆಯನ್ನು ಕಾಂಕ್ರಿಟ್ ರಸ್ತೆಯಾಗಿ ಪರಿವರ್ತನೆ ಮಾಡುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಳೆದ ೪೫ ದಿನಗಳ ಕಾಲ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿತ್ತು.
ಈ ಹಿನ್ನೆಲೆಯಲ್ಲಿ ವಾಹನಗಳು ಬದಲಿ ರಸ್ತೆಯಾದ ಕೊಡಗರಹಳ್ಳಿ- ಕಂಬಿಬಾಣೆ - ಚಿಕ್ಲಿಹೊಳೆ - ರಂಗಸಮುದ್ರ ಮೂಲಕ ಸಿದ್ದಾಪುರ ಕಡೆಗೆ ತೆರಳಬೇಕಾಗಿತ್ತು.
ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು ಬುಧವಾರದಿಂದ ಎಲ್ಲ ವಾಹನಗಳು ಗುಡ್ಡೆಹೊಸೂರು-ರಂಗಸಮುದ್ರ ಮೂಲಕವಾಗಿ ಸಿದ್ದಾಪುರ ಕಡೆಗೆ ತೆರಳುತ್ತಿರುವುದು ಕಂಡುಬAದಿದೆ.