ಕಡಂಗ, ನ. ೪: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆನೆಗಳ ಹಿಂಡು ಪ್ರತ್ಯಕ್ಷವಾಗಿವೆ. ಪ್ರತಿ ವರ್ಷವೂ ಬೆೆಟ್ಟ-ಕಾಡುಗಳಿಂದ ಮಳೆಗಾಲದಲ್ಲಿ ಆಹಾರ ಅರಸಿ ಊರಿಗೆ ಲಗ್ಗೆ ಇಡುವ ಆನೆಗಳ ಹಿಂಡು, ಕಾಫಿ, ಬಾಳೆ, ಹಲಸು, ಸೇರಿದಂತೆ ಬೆಳೆದ ಬೆಳೆಗಳನ್ನು ಹಾಳು ಮಾಡುವುದಲ್ಲದೆ ಕಳೆದ ವರ್ಷ ವಾಹನ ಮತ್ತು ವ್ಯಕ್ತಿಯ ಮೇಲೆ ದಾಳಿ ನಡೆಸಿತ್ತು.

ಕಳೆದ ಎರಡು ದಿನಗಳ ಹಿಂದೆ ೧೦ ಆನೆಗಳ ಗುಂಪೊAದು ಕರಡ ಗ್ರಾಮದ ದಿನು ಅವರ ಭತ್ತದ ಗದ್ದೆಯನ್ನು ಸಂಪೂರ್ಣವಾಗಿ ನಾಶಮಾಡಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಆನೆ ಓಡಿಸಲು ಕಾರ್ಯಾಚರಣೆ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.