ಕೂಡಿಗೆ, ನ. ೪: ತೊರೆನೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಸರ್ ಸಿ.ವಿ. ರಾಮನ್ ಇಕೋ ಕ್ಲಬ್ ವತಿಯಿಂದ ಶಾಲೆಯಲ್ಲಿ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಿಸಲಾಯಿತು.
ಶಿಕ್ಷಣ ಇಲಾಖೆ, ರಾಷ್ಟಿçÃಯ ಹಸಿರು ಪಡೆ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಆಶ್ರಯದಲ್ಲಿ ಏರ್ಪಡಿಸಿದ್ದ ಹಸಿರು ದೀಪಾವಳಿ ಆಚರಣೆಯಲ್ಲಿ ಜಾಗೃತಿ ಆಂದೋಲನಕ್ಕೆ ಮುಖ್ಯ ಶಿಕ್ಷಕ ಬಿ.ಆರ್. ಕುಮಾರ್ ಚಾಲನೆ ನೀಡಿದರು.
ಗ್ರಾ.ಪಂ. ಸದಸ್ಯ ಟಿ.ಸಿ. ಶಿವಕುಮಾರ್ ಮಾತನಾಡಿದರು. ಇಕೋ ಕ್ಲಬ್ನ ಉಸ್ತುವಾರಿ ಶಿಕ್ಷಕಿ ಬಿ.ಪು.ಸವಿತ ಪರಿಸರ ಪ್ರತಿಜ್ಞಾ ವಿಧಿ ಬೋಧಿಸಿದರು. ಶಿಕ್ಷಕರಾದ ಟಿ.ಬಿ.ಮಂಜುನಾಥ್, ಎಸ್.ಕೆ. ಪ್ರಸನ್ನ, ಜಿ. ಶ್ರೀಹರ್ಷ, ಎಸ್.ಡಿ.ಎಂ.ಸಿ. ಸದಸ್ಯರಾದ ಟಿ.ಎನ್. ಜಗದೀಶ್, ವನಿತ ಇದ್ದರು.
ನಂತರ ವಿದ್ಯಾರ್ಥಿಗಳು ಪರಿಸರ ಸ್ನೇಹಿ ದೀಪಾವಳಿ ಆಚರಣೆ ಕುರಿತಾದ ಘೋಷಣೆಗಳನ್ನು ಪ್ರಚುರಪಡಿಸಿದರು.