ಮಡಿಕೇರಿ, ನ. ೪: ಇಸ್ಲಾಮಿನಲ್ಲಿ ಸುಳ್ಳು ಹೇಳುವುದು ಅಪರಾಧವಾಗಿದ್ದು, ಸುಳ್ಳುಗಳನ್ನು ವರ್ಜಿಸಿ ಅಪ್ಪಟ ಪ್ರವಾದಿ ಅನುಯಾಯಿಗಳಾಗಬೇಕು ಎಂದು ಎಸ್‌ಕೆಎಸ್‌ಎಫ್ ಕೇಂದ್ರ ಸಮಿತಿ ಸದಸ್ಯ ಇಕ್ಬಾಲ್ ಮೌಲವಿ ಹೇಳಿದ್ದಾರೆ.
ನೆಲ್ಲಿಹುದಿಕೇರಿಯಲ್ಲಿ ಎಸ್‌ಕೆಎಸ್‌ಎಫ್ ಯುಎಇ ಕೊಡಗು ಸಮಿತಿ ಆಯೋಜಿಸಿದ್ದ ಪ್ಯಾರೆ ಮದೀನಾ-ಮೀಲಾದ್ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಇಂದು ಸುಳ್ಳು ಹೇಳುವುದು ವಾಡಿಕೆಯಾಗಿದೆ. ಪ್ರತಿಯೊಂದು ವಿಷಯದಲ್ಲಿ ಸತ್ಯಕ್ಕಿಂತ ಸುಳ್ಳುಗಳು ಹೆಚ್ಚಾಗುತ್ತಿದೆ. ಮೊಬೈಲ್ ಫೋನ್‌ಗಳು ಸುಳ್ಳುಗಳನ್ನು ಹೇಳಲು ಮತ್ತು ಅಪಪ್ರಚಾರ ಮಾಡಲು ಸಹಾಯಕವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇಸ್ಲಾಂ ಸತ್ಯವನ್ನು ಪ್ರತಿಪಾದಿಸುತ್ತದೆ, ಪ್ರವಾದಿಗಳು ಇದನ್ನೇ ಹೇಳಿದ್ದಾರೆ. ಎಲ್ಲರೂ ಸತ್ಯಮಾರ್ಗದಲ್ಲಿ ನಡೆಯಿರಿ ಎಂದು ಇಕ್ಬಾಲ್ ಮೌಲವಿ ಕರೆ ನೀಡಿದರು.
ರಾಷ್ಟಿçÃಯ ಅಧ್ಯಕ್ಷ ಸಯ್ಯದ್ ಶುಹೈಬ್ ತಂಗಳ್, ಜಿಸಿಸಿ ಕೊಡಗು ಕೋಶಾಧಿಕಾರಿ ಉಸ್ತಾದ್ ರಝಾಕ್ ಫೈಝಿ, ಯುಎಇ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಮೌಲವಿ ಕಲ್ಲೇಗ ಮಾತನಾಡಿದರು.
ಕಾರ್ಯಕ್ರಮವನ್ನು ಎಸ್‌ಕೆಎಸ್‌ಎಫ್ ಯುಎಇ ಕರ್ನಾಟಕ ರಾಜ್ಯಾಧ್ಯಕ್ಷ ಅಸ್ಕರ್ ಅಲಿ ತಂಗಳ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸನ್ಮಾನಿಸಲಾಯಿತು. ಸಮಿತಿಯ ಜಿಲ್ಲಾ ಮುಖಂಡರು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು. ಜಿಲ್ಲಾಧ್ಯಕ್ಷ ಹುಸೈನ್ ಫೈಝಿ ಸ್ವಾಗತಿಸಿ, ಯಹ್ಯಾ ಕೊಡ್ಲಿಪೇಟೆ ವಂದಿಸಿದರು.