ಮಡಿಕೇರಿ, ನ. ೪: ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಅವರು ತಾ. ೭ ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಬೆಳಿಗ್ಗೆ ೧೧ ಗಂಟೆಗೆ ಕುಶಾಲನಗರದ ಅಲ್ಪಸಂಖ್ಯಾತರ ಮುಖಂಡರೊಡನೆ ಸಭೆ ನಡೆಸಲಿದ್ದಾರೆ. ನಂತರ ಸಂಜೆ ೪ ಗಂಟೆಗೆ ನಗರದ ಸುದರ್ಶನ ವಸತಿ ಗೃಹದಲ್ಲಿ ಮಡಿಕೇರಿಯ ಅಲ್ಪಸಂಖ್ಯಾತರ ಮುಖಂಡರು ಮತ್ತು ಧಾರ್ಮಿಕ ಮುಖಂಡರೊಡನೆ ಸಭೆ ನಡೆಸಲಿದ್ದಾರೆ.