ಮಡಿಕೇರಿ,ನ.೩: ಹಿಂದೂ ಮಲಯಾಳಿ ಸಮಾಜ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಸಾಧಕರಿಗೆ ಸನ್ಮಾನ ಹಾಗೂ ಸಮಾಜದ ವಾರ್ಷಿಕ ಮಹಾಸಭೆ ತಾ.೭ರಂದು ನಡೆಯಲಿದೆ.

ಮಡಿಕೇರಿಯ ಕಾವೇರಿ ಕಲಾಕ್ಷೇತ್ರದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಸಮಾಜದ ಜಿಲ್ಲಾಧ್ಯಕ್ಷ ಕೆ.ಎಸ್. ರಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಸದ ಪ್ರತಾಪ್ ಸಿಂಹ, ಶಾಸಕರುಗಳಾದ ಎಂ.ಪಿ.ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ, ಎಂ.ಪಿ.ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ ಪಾಲ್ಗೊಳ್ಳುವರು. ಸಮಾಜದ ಗೌರವಾಧ್ಯಕ್ಷ ವಿ.ಎಂ.ವಿಜಯ, ಕುಶಾಲನಗರ ಕೇರಳ ಸಮಾಜ ಅಧ್ಯಕ್ಷ ಶಿವಾನಂದನ್, ಸಿದ್ದಾಪುರ ಕೈರಳಿ ಸಮಾಜ ಅಧ್ಯಕ್ಷ ಕೆ.ಕೆ. ಶ್ರೀನಿವಾಸ್, ಕೊಡಗು ಎಸ್‌ಎನ್‌ಡಿಪಿ ಯೂನಿಯನ್ ಅಧ್ಯಕ್ಷ ವಿ.ಕೆ.ಲೋಕೇಶ್, ಮಡಿಕೇರಿ ಕೆ.ಎನ್.ಎಸ್.ಎಸ್. ಅಧ್ಯಕ್ಷ ಕೆ.ಕೆ.ಹರೀಶ್, ಮಲಯಾಳಿ ಸಮಾಜದ ಪ್ರಧಾನ ಕಾರ್ಯದರ್ಶಿ ಪಿ.ಕೆ.ಶಶಿಕುಮಾರ್, ಖಜಾಂಚಿ ಕೆ. ಬಾಬು, ಮುಖ್ಯ ಸಲಹೆಗಾರ ಟಿ.ಕೆ.ಸುಧೀರ್, ಟಿ.ಆರ್.ವಾಸುದೇವ್ ಉಪಸ್ಥಿತರಿರುವರು.

ಮಹಾಸಭೆ

ನಂತರ ಮಧ್ಯಾಹ್ನ ೩ಗಂಟೆಗೆ ೨೦೨೦-೨೧ನೇ ಸಾಲಿನ ವಾರ್ಷಿಕ ಮಹಾಸಭೆ ಸಮಾಜದ ಅಧ್ಯಕ್ಷ ಕೆ.ಎಸ್.ರಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ತಿಳಿಸಿದ್ದಾರೆ.