ಮಡಿಕೇರಿ, ನ. ೩: ಕೇವಲ ಶಾಲೆಗಳಲ್ಲಿ ಪಡೆಯುವ ಶಿಕ್ಷಣ ಮಾತ್ರ ಬದುಕಿನಲ್ಲಿ ಪರಿಪೂರ್ಣವಾಗದು, ಇದರೊಂದಿಗೆ ವಿಧೇಯತೆ - ವಿನಮ್ರತೆಯಂತಹ ಗುಣಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರಾ ಅವರು ಸಲಹೆಯಿತ್ತರು. ಮಡಿಕೇರಿಯ ಕೊಡವ ವಿದ್ಯಾನಿಧಿ (ಕೂರ್ಗ್ ಎಜುಕೇಷನ್ ಫಂಡ್) ವತಿಯಿಂದ ಇತ್ತೀಚೆಗೆ ನಗರದ ಕೊಡವ ಸಮಾಜದಲ್ಲಿ ನಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಪಠ್ಯದೊಂದಿಗೆ ಕ್ರೀಡೆ ಸೇರಿದಂತೆ ಇನ್ನಿತರ ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಸಿ ಕೊಳ್ಳುವುದರೊಂದಿಗೆ ಉತ್ತಮ ಸಾಧನೆ ತೋರುವಂತೆ ಅವರು ಕರೆ ನೀಡಿದರು.

ಅತಿಥಿಗಳಾಗಿ ಪಾಲ್ಗೊಂಡಿದ್ದ ಗೋಣಿಕೊಪ್ಪಲು ಲೋಪಾಮುದ್ರ ಆಸ್ಪತ್ರೆಯ

(ಮೊದಲ ಪುಟದಿಂದ) ವೈದ್ಯರುಗಳಾದ ಮುಕ್ಕಾಟಿರ ಅಮೃತ್ ನಾಣಯ್ಯ, ಡಾ. ಸೌಮ್ಯ ನಾಣಯ್ಯ, ಕುಶಾಲನಗರದ ಡಾ. ಮುಕ್ಕಾಟಿರ ಪೊನ್ನಪ್ಪ ಅವರುಗಳು ಶಿಕ್ಷಣ ಹಾಗೂ ಆರೋಗ್ಯಕ್ಕೆ ನೀಡಬೇಕಾದ ಪ್ರಾಮುಖ್ಯತೆ ಹಾಗೂ ತಮ್ಮ ಅನುಭವಗಳ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭ ಎಸ್.ಎಸ್. ಎಲ್.ಸಿ.ಯಿಂದ ಮೇಲ್ಪಟ್ಟು ಉನ್ನತ ಶಿಕ್ಷಣದವರೆಗೆ ಉತ್ತಮ ಸಾಧನೆ ತೋರಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ವಿವಿಧ ವಿಭಾಗದ ವಿದ್ಯಾರ್ಥಿಗಳಿಗೆ ಒಟ್ಟು ೨೯ ಮಂದಿಗೆ ರೂ. ೩.೫೦ ಲಕ್ಷ ವಿದ್ಯಾರ್ಥಿ ವೇತನ ನೀಡಲಾಯಿತು. ಇದರೊಂದಿಗೆ ಎಂ.ಬಿ.ಬಿ.ಎಸ್., ಇಂಜಿನಿಯರಿAಗ್‌ನಲ್ಲಿನ ಸಾಧನೆಗಾಗಿ ಬೆಂಗಳೂರಿನ ಉದ್ಯಮಿ ನಿವೃತ್ತ ಮೇಜರ್ ಬೊಳ್ಳಚೆಟ್ಟಿರ ಎಂ. ಅಪ್ಪಚ್ಚು ಅವರು ನೀಡಿರುವ ದೇಣಿಗೆಯಂತೆ ಸಾಧಕರಿಗೆ ರೂ. ೯ ಲಕ್ಷ ಹಣವನ್ನು ವಿತರಿಸಲಾಯಿತು. ಎಂ.ಬಿ.ಬಿ.ಎಸ್.ಗೆ ರೂ. ೭೫ ಸಾವಿರ ಹಾಗೂ ಇಂಜಿನಿಯರಿAಗ್‌ಗೆ ತಲಾ ರೂ. ೬೦ ಸಾವಿರ ಹಣ ಸಹಾಯ ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾನಿಧಿಯ ಅಧ್ಯಕ್ಷ ಕೂತಂಡ ಎಂ. ಉತ್ತಪ್ಪ ಅವರು ವಹಿಸಿದ್ದರು. ಉಪಾಧ್ಯಕ್ಷರಾದ ಕೊಂಗAಡ ಎಸ್. ದೇವಯ್ಯ, ಖಜಾಂಚಿ ಕೊಡಂದೆರ ಸರೋಜ ಪೂವಣ್ಣ, ಕಾರ್ಯದರ್ಶಿ ಮೇದುರ ಕಾವೇರಪ್ಪ ಹಾಜರಿದ್ದರು.

ಈ ಸಂದರ್ಭ ಎಸ್ಪಿ ಕ್ಷಮಾ ಮಿಶ್ರಾ ಸೇರಿದಂತೆ ಅತಿಥಿಗಳನ್ನು ಗೌರವಿಸಲಾಯಿತು. ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಮುನ್ನ ವಿದ್ಯಾನಿಧಿಯ ೧೦೫ನೇ ವಾರ್ಷಿಕ ಮಹಾಸಭೆ ನಡೆದು ಕಾರ್ಯಚಟುವಟಿಕೆ, ಲೆಕ್ಕಪತ್ರದ ಕುರಿತು ಚರ್ಚಿಸಲಾಯಿತು. ಬೊಟ್ಟೋಳಂಡ ಕಾಶಿ ಅಚ್ಚಯ್ಯ ಪ್ರಾರ್ಥಿಸಿ, ಕೆ.ಪಿ. ಉತ್ತಪ್ಪ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಎಸ್. ದೇವಯ್ಯ ವಂದಿಸಿದು.