ವೀರಾಜಪೇಟೆ,ನ.೩: ಇಲ್ಲಿನ ತಾಲೂಕು ಮಿನಿ ವಿಧಾನ ಸೌಧದ ಬಳಿಯ ‘ಅಮರ ಜವಾನ ಸ್ಮಾರಕ’ ಕ್ಕೆ ಪುಷ್ಪಗುಚ್ಛ ಅರ್ಪಿಸಿ ಹುತಾತ್ಮರಾದ ಯೋಧರಿಗೆ ಗೌರವ ಹಾಗೂ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಕೊಡಗು ಮಾಜಿ ಸೈನಿಕರ ಸಹಕಾರ ಸಂಘದ ವತಿಯಿಂದ ಸಂಘದ ಅಧ್ಯಕ್ಷ ಚೇಂದ್ರಿಮಾಡ ಕೆ.ನಂಜಪ್ಪ ನವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಕರ್ನಲ್ ವಾಟೇರಿರ ಪಿ.ಸದಾಶಿವ, ವೀರಾಜಪೇಟೆಯ ಇಸಿಹೆಚ್‌ಎಸ್ ಪಾಲಿಕ್ಲಿನಿಕ್‌ನ ಕರ್ನಲ್ ಲಕ್ಷಿö್ಮನಾರಾಯಣ, ವೀರಾಜಪೇಟೆ ವಿಧಾನ ಸಭಾ ಕ್ಷೇತ್ರ ಶಾಸಕ ಕೆ.ಜಿ.ಬೋಪಯ್ಯ, ವೀರಾಜಪೇಟೆ ಉಪ ಅಧೀಕ್ಷಕ ಜೈಕುಮಾರ್, ಭಾರತೀಯ ಸ್ಟೇಟ್ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ಕಿರಣ್ ಕುಮಾರ್, ಪಟ್ಟಣ ಪಂಚಾಯಿತಿ

(ಮೊದಲ ಪುಟದಿಂದ) ಅಧ್ಯಕ್ಷೆ ಟಿ.ಆರ್.ಸುಶ್ಮಿತಾ, ಆಟೋ ಚಾಲಕರ ಸಂಘ,ಕಾವೇರಿ ಲಘು ವಾಹನ ಮಾಲೀಕ ಚಾಲಕರ ಸಂಘದವರು ಪುಷ್ಪ ನಮನ ಅರ್ಪಿಸಿದರು. ಯೋಧರ ಸ್ಮಾರಕ ಸ್ಥಂಭದ ಆವರಣದಲ್ಲಿ ಜಿಲ್ಲಾ ಸಶಸ್ತç ಪೊಲೀಸ್ ತುಕಡಿಯವರಿಂದ ಕುಶಾಲ ತೋಪು ಹಾರಿಸಿ ‘ಉಲ್ಟಿ ಸಸ್ತ್ç’ ನೊಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಸೈನಿಕರ ಸಹಕಾರ ಸಂಘದ ಸದಸ್ಯರು, ಮಾಜಿ ಯೋಧರು, ಸಾರ್ವಜನಿಕರು, ವಿದ್ಯಾರ್ಥಿಗಳು ಇದ್ದರು.