ಶನಿವಾರಸಂತೆ, ನ. ೩: ಶನಿವಾರಸಂತೆಯ ವಿಘ್ನೇಶ್ವರ ಬಾಲಿಕಾ ಪ್ರೌಢ ಶಾಲೆಯಲ್ಲಿ ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ಮಾಹಿತಿ ಕಾರ್ಯಾಗಾರ ನಡೆಯಿತು. ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂನ ಉಪನಿರೀಕ್ಷಕ ಕೆ.ಎಸ್. ಹರೀಶ್ಚಂದ್ರ, ಅಧಿಕಾರಿಗಳಾದ ಧನಂಜಯ್ ಹಾಗೂ ಶನಿವಾರಸಂತೆ ಪೊಲೀಸ್ ಠಾಣೆಯ ಎಸ್. ಪರಶಿವಮೂರ್ತಿ ಇವರುಗಳು ಮಾತನಾಡಿದರು.

ಹೆಣ್ಣುಮಕ್ಕಳ ಕಿರುಕುಳ ಅಥವಾ ಇನ್ಯಾವುದೇ ತೊಂದರೆಗಳಾದಲ್ಲಿ ೧೧೨ಕ್ಕೆ ಕರೆ ಮಾಡಿದರೆ, ಪೊಲೀಸರು ಕೂಡಲೇ ಧಾವಿಸಿ ನಿಮ್ಮ ಸಹಾಯಕ್ಕೆ ನೆರವಾಗುವರು ಎಂದು ಹೇಳಿದರು. ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು. ಸಾರ್ವಜನಿಕರ ರಕ್ಷಣೆಯಲ್ಲಿ ಪೊಲೀಸರಿಗೆ ವಿದ್ಯಾರ್ಥಿಗಳ, ಪೋಷಕರ, ಸಾರ್ವಜನಿಕರ ಸಹಕಾರ ಅಗತ್ಯ ಎಂದರು.

ಪ್ರಾAಶುಪಾಲ ಶಿವಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಪೊಲೀಸ್ ಸಿಬ್ಬಂದಿ ಪ್ರದೀಪ್‌ಕುಮಾರ್, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದು, ಶಿಕ್ಷಕ ಜಯಕುಮಾರ್ ಸ್ವಾಗತಿಸಿ, ವಂದಿಸಿದರು.