ಸೋಮವಾರಪೇಟೆ, ನ. ೩: ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕೆವಿಬಿ ಫ್ರೆಂಡ್ಸ್ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಕೆವಿಬಿ ಕ್ರಿಕೆಟ್ ಸೀಸನ್-೩ ಪಂದ್ಯಾಟದಲ್ಲಿ ಕೊಡಗು ಮ್ಯಾಕ್ಸ್ವೆಲ್ ತಂಡ ಪ್ರಥಮ ಸ್ಥಾನ ಗಳಿಸುವ ಮೂಲಕ ಟ್ರೋಫಿ ಯೊಂದಿಗೆ ೨೦ ಸಾವಿರ ನಗದು ಬಹುಮಾನಕ್ಕೆ ಪಾತ್ರವಾಯಿತು.
ಫೈನಲ್ ಪಂದ್ಯಾಟದಲ್ಲಿ ಮ್ಯಾಕ್ಸ್ವೆಲ್ ತಂಡವು ಶನಿವಾರ ಸಂತೆಯ ಈವ್‌ನಿಂಗ್ ಕ್ರಿಕೆರ‍್ಸ್ ತಂಡವನ್ನು ಮಣಿಸಿತು. ಶನಿವಾರ ಸಂತೆ ತಂಡ ದ್ವಿತೀಯ ಸ್ಥಾನವಾಗಿ ಟ್ರೋಫಿಯೊಂದಿಗೆ ರೂ. ೧೦ ಸಾವಿರ ನಗದು ಬಹುಮಾನ ಪಡೆಯಿತು.
ಪಂದ್ಯಾಟದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ೩೦ ತಂಡಗಳು ಭಾಗವಹಿಸಿದ್ದವು. ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ಹಾನಗಲ್ಲು, ಗುತ್ತಿಗೆದಾರ ಮಂಜುನಾಥ್, ಕಿರಗಂದೂರು ರವಿ, ಕೆವಿಬಿ ಕ್ರಿಕೆರ‍್ಸ್ ಅಧ್ಯಕ್ಷ ಸುಮಂತ್, ಉಪಾಧ್ಯಕ್ಷ ಸಚಿನ್, ಕಾರ್ಯದರ್ಶಿ ದೀಪಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.