ಮಡಿಕೇರಿ, ನ. ೪: ಕೊಡಗು ಜಿಲ್ಲಾ ಆಯುಷ್ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ನಗರದ ಮಹದೇವಪೇಟೆಯ ಜಿಲ್ಲಾ ಆಯುಷ್ ಕಚೇರಿ ಸಭಾಂಗಣದಲ್ಲಿ ಧನ್ವಂತರಿ ಜಯಂತಿ ಮತ್ತು ೬ನೇ ಆಯುರ್ವೇದ ದಿನಾಚರಣೆ ‘ಆಯುರ್ವೇದದಿಂದ ಪೋಷಣೆ’ದೊಂದಿಗೆ ಜರುಗಿತು.

ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ತಮ್ಮ ಸುತ್ತ ಮುತ್ತಲ ಪರಿಸರವನ್ನು ಶುಚಿಯಾಗಿಡಬೇಕು. ಕಸದಿಂದ ಗೊಬ್ಬರ ಮಾಡಿ ಔಷಧ ಗಿಡಗಳ ನಿರ್ವಹಣೆ. ಹಸಿಕಸವನ್ನು ಗೊಬ್ಬರವಾಗಿಸಿ ತಮ್ಮ ಸುತ್ತ ಮುತ್ತಲ ಪರಿಸರದಲ್ಲಿ ಆಯುರ್ವೇದ ಸಸ್ಯಗಳನ್ನು ಬೆಳೆಸಬೇಕು. ಜೊತೆಗೆ ಆಯುಷ್ ಪದ್ಧತಿಯ ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ಮಾಡಿದರು.

ತಜ್ಞ ವೈದ್ಯರಾದ ಡಾ. ಪಲ್ಲವಿ ನಾಯಕ ಟಿ.ಎನ್. ಅವರು ಆಯುರ್ವೇದದಿಂದ ಪೋಷಣೆ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಯುಷ್ ವೈದ್ಯಾಧಿಕಾರಿಗಳಾದ ಡಾ. ಶೈಲಜಾ ಜಿ., ಡಾ. ಅರುಣ್ ಅಸೂಟಿ, ಡಾ. ವಿನ್ಯಾಸ, ಡಾ. ಸೌಪರ್ಣಿಕ, ಡಾ. ಶ್ವೇತಾ ಕೆ.ಎಸ್. ಮತ್ತು ಆಯುಷ್ ಇಲಾಖೆಯ ಎಲ್ಲಾ ಸಿಬ್ಬಂದಿಗಳು ಹಾಜರಿದ್ದರು.

ಜಿಲ್ಲಾ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಡಾ. ಶುಭಾ ಕೆ.ಜಿ. ನಿರೂಪಿಸಿದರು. ವೀರಾಜಪೇಟೆ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಡಾ. ರವಿಕುಮಾರ್ ಅವರು ಸ್ವಾಗತಿಸಿದರು. ಕೊಡಗು ಜಿಲ್ಲಾ ಆಯುಷ್ ಅಧಿಕಾರಿ ಡಾ. ಶ್ರೀನಿವಾಸ ಎಂ.ಬಿ. ಪ್ರಾಸ್ತಾವಿಕ ಭಾಷಣ ಮಾಡಿದರು.