ಮಡಿಕೇರಿ, ನ. ೪: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗದ ನಡುವಿನ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ‘ಕುಟುಂಬ-೨೦೨೧’ ರಲ್ಲಿ ಕಟ್ಟೆಮನೆ ಹಾಗೂ ಪೊನ್ನಚನ ತಂಡಗಳು ಪ್ರಿ ಕ್ವಾರ್ಟರ್ ಹಂತಕ್ಕೆ ಪ್ರವೇಶ ಪಡೆದುಕೊಂಡವು.

ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಪಂದ್ಯಾವಳಿಗೆ ಇಂದಿನಿAದ ಮರು ಚಾಲನೆ ನೀಡಲಾಯಿತು. ಮೈದಾನ ೧ರಲ್ಲಿ ಇಂದು ನಡೆದ ಆರು ಓವರ್‌ಗಳಿಗೆ ಸೀಮಿತವಾಗಿದ್ದ ಪಂದ್ಯಾವಳಿಯಲ್ಲಿ ಮೊದಲು ಬ್ಯಾಟ್ ಮಾಡಿದ ಕುಕ್ಕುನೂರು ತಂಡ ೪ ವಿಕೆಟ್‌ಗೆ ೭೦ ರನ್ ಗಳಿಸಿದರೆ, ಪಡ್ಪು ಮನೆ ತಂಡ ೨ ವಿಕೆಟ್ ಕಳೆದುಕೊಂಡು ೫೭ ರನ್ ಗಳಿಸಿ ೧೩ ರನ್‌ಗಳ ಅಂತರದಿAದ ಸೋಲನುಭವಿಸಿತು.

ಚೆರಿಯಮನೆ ತಂಡ ೪ ವಿಕೆಟ್‌ಗೆ ೬೦ರನ್ ಗಳಿಸಿದರೆ, ಪೊನ್ನಚನ ತಂಡ ೪ ವಿಕೆಟ್‌ಗೆ ೬೫ ರನ್

ಗಳಿಸಿ ೬ ವಿಕೆಟ್‌ಗಳ ಜಯ ಸಂಪಾದಿಸಿತು.

(ಮೊದಲ ಪುಟದಿಂದ) ಕುಕ್ಕುನೂರು ತಂಡ ೪ ವಿಕೆಟ್‌ಗೆ ೪೮ ರನ್ ಕಲೆಹಾಕಿದರೆ, ಬಿದ್ರುಪಣೆ ತಂಡ ೬ ವಿಕೆಟ್ ಕಳೆದುಕೊಂಡು ೪೭ ರನ್ ಗಳಿಸಿ ಕೊನೆಯ ಕ್ಷಣದಲ್ಲಿ ಕೇವಲ ೨ ರನ್‌ಗಳ ಅಂತರದಿAದ ಸೋಲನುಭವಿಸಿತು.

ಕುಕ್ಕುನೂರು ಹಾಗೂ ಪೊನ್ನಚನ ತಂಡಗಳ ನಡುವೆ ನಡೆದ ಮತ್ತೊಂದು ಪಂದ್ಯದಲ್ಲಿ ಕುಕ್ಕುನೂರು ತಂಡ ೬ ವಿಕೆಟ್‌ಗೆ ೩೨ರನ್ ಗಳಿಸಿದರೆ, ಉತ್ತರವಾಗಿ ಆಡಿದ ಪೊನ್ನಚನ ತಂಡ ಯಾವದೇ ವಿಕೆಟ್ ನಷ್ಟವಿಲ್ಲದೆ ಗೆಲುವು ಸಾಧಿಸಿ ಪ್ರಿ ಕ್ವಾರ್ಟರ್ ಪ್ರವೇಶಿಸಿತು.

ಮೈದಾನ ೨ರಲ್ಲಿ ನಡೆದ ಪಂದ್ಯಾವಳಿಯಲ್ಲಿ ಮೂವನ ತಂಡ ೪ ವಿಕೆಟ್‌ಗೆ ೪೫ ರನ್ ಗಳಿಸಿದರೆ, ಸೂದನ ತಂಡ ೭ವಿಕೆಟ್ ಕಳೆದುಕೊಂಡು ೪೧ ರನ್ ಗಳಿಸಿ ೪ ರನ್‌ಗಳ ಅಂತರದಿAದ ಸೋಲನುಭವಿಸಿತು. ಕಟ್ಟೆಮನೆ ತಂಡ ೪ ವಿಕೆಟ್‌ಗೆ ೬೩ ರನ್ ಗಳಿಸಿದರೆ, ಪೈಕೇರ ತಂಡ ನಿಗದಿತ ಓವರ್‌ನಲ್ಲಿ ೫ ವಿಕೆಟ್ ಕಳೆದುಕೊಂಡು ಕೇವಲ ೧೪ ರನ್ ಮಾತ್ರ ಗಳಿಸಿ ೫೦ರನ್‌ಗಳ ಭಾರೀ ಅಂತರದಿAದ ಸೋಲನುಭವಿಸಬೇಕಾಯಿತು. ಮತ್ತೊಂದು ಪಂದ್ಯದಲ್ಲಿ ಕಟ್ಟೆಮನೆ ತಂಡ ೧ ವಿಕೆಟ್‌ಗೆ ೬೭ ರನ್ ಗಳಿಸಿದರೆ, ಪಟ್ಟಡ ತಂಡ ೫ ವಿಕೆಟ್‌ಗೆ ೪೦ರನ್ ಗಳಿಸಿ ೪೭ರನ್‌ಗಳ ಅಂತರದಿAದ ಸೋಲನುಭವಿಸಿತು. ಇನ್ನೊಂದು ಪಂದ್ಯದಲ್ಲಿ ಮೂವನ ತಂಡ ೪ ವಿಕೆಟ್‌ಗೆ ೩೮ ರನ್ ಗಳಿಸಿದರೆ, ಕಟ್ಟೆಮನೆ ತಂಡ ೨ ವಿಕೆಟ್ ನಷ್ಟದಲ್ಲಿ ಗೆಲುವು ಸಾಧಿಸಿ ಪ್ರಿ ಕ್ವಾರ್ಟರ್‌ಗೆ ಪ್ರವೇಶ ಪಡೆಯಿತು.

ದೀಪ ಬೆಳಗಿಸಿ ಚಾಲನೆ

ಮುಂದೂಡಲ್ಪಟ್ಟಿದ್ದ ಪಂದ್ಯಾವಳಿಯಾದರೂ ದೀಪಾವಳಿ ಹಿನ್ನೆಲೆಯಲ್ಲಿ ಪಂದ್ಯಾಟಕ್ಕೆ ದೀಪ ಬೆಳಗುವದರ ಮೂಲಕ ಚಾಲನೆ ನೀಡಲಾಯಿತು. ಕೊಡಗು ಗೌಡ ಯವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, ಕಾರ್ಯದರ್ಶಿ ಕಟ್ಟೆಮನೆ ರೋಶನ್, ಉಪಾಧ್ಯಕ್ಷ ಪಾಣತ್ತಲೆ ಜಗದೀಶ್, ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್, ಗೌರವ ಸಲಹೆಗಾರ ಯಾಲದಾಳು ಹರೀಶ್, ಆಹಾರ ಸಮಿತಿ ಅಧ್ಯಕ್ಷ ಪರಿಚನ ಸತೀಶ್, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಕ್ಕೇರ ಲಕ್ಷö್ಮಣ ಇತರರು ಚಾಲನೆ ನೀಡಿದರು.