ಮಡಿಕೇರಿ, ನ. ೪: ನಕಲಿ ನೇಮಕಾತಿ ಪತ್ರ ಸೃಷ್ಟಿಸಿ ಸರಕಾರಿ ನೌಕರಿ ಕೊಡಿಸುವದಾಗಿ ಅಮಾಯಕರಿಂದ ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಬಂಧನಕ್ಕೊಳಗಾಗಿದ್ದ ಆರೋಪಿಗಳಿಗೆ ಜಾಮೀನು ಲಭಿಸಿದೆ.

ಗ್ರಾಮ ಲೆಕ್ಕಿಗರ ಹುದ್ದೆಗೆ ನೇಮಿಸಲು ಮತ್ತು ಸಿಂಧುತ್ವ ಪತ್ರ ನೀಡಲು ಜಿಲ್ಲಾಡಳಿತದ ಲಾಂಛನದೊAದಿಗೆ ಜಿಲ್ಲಾಧಿಕಾರಿಗಳ ಸಹಿ ನಕಲು ಮಾಡಿ ನೇಮಕಾತಿ ಪತ್ರ ಕಳುಹಿಸಿ ಲಕ್ಷಾಂತರ ರೂಪಾಯಿ ಹಣ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬAಧಿಸಿದAತೆ ಜಿಲ್ಲಾ ಅಪರಾಧ ಪತ್ತೆದಳದವರು ಕಳೆದ ಸೆ.೨೩ರಂದು ಚಂದ್ರಶೇಖರ್, ರಾಜಮಣಿ (ಲೋಕೇಶ್),

(ಮೊದಲ ಪುಟದಿಂದ) ಗಣಪತಿ (ಶಭರೀಶ್) ಎಂಬವರುಗಳನ್ನು ಬಂಧಿಸಿದ್ದರು. ನ್ಯಾಯಾಂಗ ಬಂಧನದಲ್ಲಿದ್ದ ಈ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಿದೆ. ಆದರೆ, ನಂತರದಲ್ಲಿ ಸೆರೆ ಸಿಕ್ಕ ಪ್ರಕರಣದ ಪ್ರಮುಖ ರೂವಾರಿ ಪುತ್ತೂರಿನ ಪುನಿತ್‌ಕುಮಾರ್ ಹಾಗೂ ಮೈಸೂರಿನ ಅರುಣ್‌ಕುಮಾರ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಕರಣದ ಬಗ್ಗೆ ಸಿಐಡಿ ಘಟಕದ ಡಿವೈಎಸ್‌ಪಿ ಕರೀಂ ರಾವ್‌ತರ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ. ? ಸಂತೋಷ್