ಸಿದ್ದಾಪುರ, ನ. ೩: ಮೈಸೂರು ಓ.ಡಿ.ಪಿ ಸಂಸ್ಥೆ ಹಾಗೂ ಅಂದೇರಿ ಹಿಲ್ಪೆ ಜರ್ಮನಿ ಸಂಸ್ಥೆಯ ವತಿಯಿಂದ ನೋಂದಾಯಿತ ರೈತರಿಗೆ ಉಚಿತ ಗೊಬ್ಬರ ವಿತರಣೆ ಕಾರ್ಯಕ್ರಮ ಸಿದ್ದಾಪುರದ ಸೆಂಟನರಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಓ.ಡಿ.ಪಿ. ಸಂಸ್ಥೆಯ ಸಂಯೋಜಕಿ ಜಾಯ್ಸ್ ಮೆನೇಜಸ್ ಓ.ಡಿ.ಪಿ. ಸಂಸ್ಥೆಯು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ ಎಂದರು. ವತಿಯಿಂದ ಮಹಿಳೆಯರಿಗೆ ಸ್ವಯಂ ಉದ್ಯೋಗ ಮಾಡುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ರೂಪಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಸಿದ್ದಾಪುರ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮಾದಪ್ಪ, ಗ್ರಾಮ ಸಹಾಯಕ ಕೃಷ್ಣ, ಓ.ಡಿ.ಪಿ. ಸಂಸ್ಥೆಯ ಪದಾಧಿಕಾರಿಗಳಾದ ವಿಜಯನಾರಾಯಣ, ಧನುಕುಮಾರ್, ವಿಮಲ ಇನ್ನಿತರರು ಹಾಜರಿದ್ದರು. ಇದೇ ಸಂದರ್ಭ ೮೬ ರೈತರಿಗೆ ಗೊಬ್ಬರ ವಿತರಿಸಲಾಯಿತು.