*ಗೋಣಿಕೊಪ್ಪ, ನ. ೩: ಬೇಟೋಳಿ ಶ್ರೀ ಕಾಕಟಚ್ಚ ಯೂತ್ ಕ್ಲಬ್ ಆಯೋಜಿಸಿದ್ದ ವಾಲಿಬಾಲ್ ಕ್ರೀಡಾಕೂಟದಲ್ಲಿ ಜೋಡುಬೀಟಿ ನೆಹರು ಕಾಲೋನಿಯ ಡೈಮಂಡ್ ಸ್ಟರ‍್ಸ್ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.

ಅಮ್ಮತ್ತಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಮೊದಲನೇ ವರ್ಷದ ಕ್ರೀಡಾಕೂಟದಲ್ಲಿ ನೆಹರು ನಗರದ ಡೈಮಂಡ್ ಸ್ಟಾರ್ ತಂಡ ಬಿಳುಗಂದ ಬಿ.ವೈ.ಸಿ. ತಂಡದ ವಿರುದ್ಧ ಅಂತಿಮ ಹಣಾಹಣಿಯಲ್ಲಿ ಜಯಗಳಿಸಿ ಐದು ಸಾವಿರ ರೂಪಾಯಿ ನಗದು ಹಾಗೂ ಟ್ರೋಫಿಯನ್ನು ಪಡೆದುಕೊಂಡಿದೆ.

ನಿಖಿಲ್ ನಾಯಕತ್ವದ ತಂಡದಲ್ಲಿ ದರ್ಶನ್, ಚೇತನ್, ಕುಟ್ಟಪ್ಪ, ಜಗನಿ, ಪ್ರಮೋದ್ ಪಂದ್ಯಾಟದಲ್ಲಿ ಭಾಗವಹಿಸಿದ್ದರು. ತಂಡದ ವ್ಯವಸ್ಥಾಪಕ ವೇಣುಗೋಪಾಲ್ ಇದ್ದರು.