ಕುಶಾಲನಗರ, ನ. ೩: ಲಯನ್ಸ್ ಕ್ಲಬ್ ಮೂಲಕ ಕುಶಾಲನಗರದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಸುಸಜ್ಜಿತ ಕಣ್ಣಿನ ಆಸ್ಪತ್ರೆ ನಿರ್ಮಾಣಕ್ಕೆ ಚಿಂತನೆ ಹರಿಸಲಾಗಿದೆ. ಸುಮಾರು ರೂ. ೭ ಕೋಟಿ ವೆಚ್ಚದಲ್ಲಿ ನಿರ್ಮಾಣ ವಾಗುವ ಉಚಿತ ಕಣ್ಣಿನ ಆಸ್ಪತ್ರೆಗೆ ಸದ್ಯದಲ್ಲಿಯೇ ಕ್ರಿಯಾಯೋಜನೆ ರೂಪುಗೊಳ್ಳಲಿದೆ ಎಂದು ಲಯನ್ಸ್ ಕ್ಲಬ್ ರಾಜ್ಯಪಾಲ ವಸಂತಕುಮಾರ್ ಶೆಟ್ಟಿ ಹೇಳಿದರು.

ಲಯನ್ಸ್ ಕ್ಲಬ್ ಇಲ್ಲಿನ ಎಪಿಎಇಎಂಎಸ್ ಹಾಲ್‌ನಲ್ಲಿ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿ ಅವರು ಸಮಾಜಕ್ಕೆ ಉತ್ತಮ ಸೇವೆ ನೀಡುವುದು ಲಯನ್ಸ್ ಸಂಸ್ಥೆಯ ಗುರಿಯಾಗಿದೆ .

ಪ್ರಸ್ತುತ ಸಂದರ್ಭಕ್ಕೆ ತಕ್ಕಂತೆ ಸಮಾಜ ಅಪೇಕ್ಷಿಸುವ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಬೇಕಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕುಶಾಲನಗರ, ಸೋಮವಾರಪೇಟೆ ಲಯನ್ಸ್ ಕ್ಲಬ್ ಕಾರ್ಯಚಟುವಟಿಕೆ, ಸಾಧನೆಗಳ ವರದಿ ವಾಚನ ಮಾಡಲಾಯಿತು.

ಜಿಲ್ಲೆಗೆ ನೂತನವಾಗಿ ಕೊಪ್ಪ, ಪಿರಿಯಾಪಟ್ಟಣ ಕ್ಲಬ್‌ಗಳ ಸೇರ್ಪಡೆಗೊಳಿಸಿ ಹೊಸ ಸದಸ್ಯರಿಗೆ ಪ್ರಮಾಣವಚನ ಬೋಧಿಸಿ ಕ್ಲಬ್‌ಗೆ ಸೇರ್ಪಡೆಗೊಳಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ವಿಶ್ವಶಾಂತಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು.

ವೇದಿಕೆಯಲ್ಲಿ ಲಯನ್ಸ್ ಜಿಲ್ಲಾ ಪ್ರಥಮ ಮಹಿಳೆ ಡಾ. ದಿವ್ಯ ವಿ ಶೆಟ್ಟಿ, ವಿವಿಧ ಘಟಕಗಳ ಪ್ರಮುಖರಾದ ಗ್ಲೆನ್ ನಿಶಾಂತ್ ಮೆನೆಜಸ್, ಧನು ಉತ್ತಯ್ಯ, ಸಂಜಿತ್ ಶೆಟ್ಟಿ, ಡಾ. ಮೆಲ್ವಿನ್ ಡಿಸೋಜ, ಡಾ.ಗೀತಾಪ್ರಕಾಶ್, ಕುಶಾಲನಗರ ಕ್ಲಬ್ ಅಧ್ಯಕ್ಷ ಟಿ.ಕೆ. ರಾಜಶೇಖರ್, ಉಪಾಧ್ಯಕ್ಷ ಎಂ.ಎಸ್. ಚಿಣ್ಣಪ್ಪ, ಕಾರ್ಯದರ್ಶಿ ವಿ.ಎಸ್. ಸುಮನ್ ಬಾಲಚಂದ್ರ, ಖಜಾಂಚಿ ಕೆ.ಕೆ. ಹೇಮಂತ್, ಸೋಮವಾರಪೇಟೆ ಕ್ಲಬ್ ಅಧ್ಯಕ್ಷ ಸಿ.ಕೆ. ಮಲ್ಲಪ್ಪ, ಕಾರ್ಯದರ್ಶಿ ಜಿ.ಎಸ್. ರಾಜಾರಾಮ್, ಖಜಾಂಚಿ ಸಿ.ಕೆ. ರಾಜೀವ್, ಮಾಜಿ ಅಧ್ಯಕ್ಷ ಕೊಡಗನ ಹರ್ಷ ಮತ್ತಿತರರು ಇದ್ದರು.