ಸೋಮವಾರಪೇಟೆ, ನ. ೩: ಇಲ್ಲಿನ ಕಕ್ಕೆಹೊಳೆ ಜಂಕ್ಷನ್ ಬಳಿ ರಸ್ತೆ ಬದಿಯ ಚರಂಡಿಯಲ್ಲಿ ಮಣ್ಣು ಶೇಖರಣೆಗೊಂಡು ಮಳೆ ಹಾಗೂ ಕೊಳಚೆ ನೀರು ರಸ್ತೆಯ ಮೇಲೆಯೇ ಹರಿಯುತ್ತಿದ್ದ ಹಿನ್ನೆಲೆ ಪಟ್ಟಣ ಪಂಚಾಯಿತಿಯಿAದ ಚರಂಡಿಯನ್ನು ದುರಸ್ತಿಗೊಳಿಸಲಾಯಿತು.

ಚರಂಡಿಯಲ್ಲಿ ಮಣ್ಣು ಶೇಖರಣೆಗೊಂಡಿದ್ದರಿAದ ಮಳೆ ನೀರಿನೊಂದಿಗೆ ಪಟ್ಟಣದ ಕಲುಷಿತ ನೀರಿನ ಸರಾಗ ಹರಿಯುವಿಕೆಗೆ ತಡೆಯಾಗಿತ್ತು. ಇದರಿಂದಾಗಿ ಕೊಳಚೆ ನೀರು ರಸ್ತೆಯ ಮೇಲೆಯೇ ಹರಿಯುತ್ತಿದ್ದು, ವಾಹನಗಳು ತೆರಳುವ ಸಂದರ್ಭ ಪಾದಚಾರಿಗಳ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಕೊಳಚೆ ನೀರು ಮೈಮೇಲೆ ಸಿಂಚನವಾಗುತ್ತಿದ್ದ ಹಿನ್ನೆಲೆ ಶಾಲಾ ಕಾಲೇಜು ವಿದ್ಯಾರ್ಥಿಗಳೂ ಸಮಸ್ಯೆ ಎದುರಿಸುತ್ತಿದ್ದರು.

ಇದನ್ನು ಮನಗಂಡ ಪಟ್ಟಣ ಪಂಚಾಯಿತಿ ಚರಂಡಿ ದುರಸ್ತಿಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದು, ಇದೀಗ ಚರಂಡಿಯನ್ನು ಶುಚಿಗೊಳಿಸುವ ಮೂಲಕ ನೀರಿನ ಸರಾಗ ಹರಿಯುವಿಕೆಗೆ ಅವಕಾಶ ಕಲ್ಪಿಸಿದೆ. ಈ ಸಂದರ್ಭ ಪಂಚಾಯಿತಿ ಉಪಾಧ್ಯಕ್ಷ ಸಂಜೀವ, ಸದಸ್ಯ ಮಹೇಶ್, ಮುಖ್ಯಾಧಿಕಾರಿ ನಾಚಪ್ಪ ಅವರುಗಳು ಹಾಜರಿದ್ದರು.