ಮಡಿಕೇರಿ, ನ. ೩; ಡ್ಯಾನ್ಸ್ ಸ್ಪೋರ್ಟ್ಸ್ ಅಸೋಸಿಯೇಶನ್ ಭಾರತ್ ಅಂಡ್ ಪರ್ಫಾಮಿಂಗ್ ಆರ್ಟ್ಸ್ ಅಸೋಸಿಯೇಶನ್ ಆಫ್ ಇಂಡಿಯಾ ಸಮರ್ಪಿಸಿದ್ದ, ಡ್ಯಾನ್ಸ್ ಸ್ಪೋರ್ಟ್ಸ್ ಆಫ್ ಕರ್ನಾಟಕ ಆಯೋಜಿಸಿದ್ದ ಗುರುಕುಲ ಕಲಾ ಮಂಡಳಿಯ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ಡ್ಯಾನ್ಸ್ ಸ್ಪೋರ್ಟ್ಸ್ ಚಾಂಪಿಯನ್ ಶಿಪ್-೨೦೨೧ ಸ್ಪರ್ಧೆಯಲ್ಲಿ ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್ ಸಮಗ್ರ ಪ್ರಶಸ್ತಿಯೊಂದಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಚಾಂಪಿಯನ್ ಪ್ರಶಸ್ತಿಯೊಂದಿಗೆ ರೋಲಿಂಗ್ ಟ್ರೋಫಿಯನ್ನೂ ಪಡೆದುಕೊಂಡಿದೆ.
ಮಡಿಕೇರಿಯ ಫೀ.ಮಾ. ಕಾರ್ಯಪ್ಪ ವೃತ್ತದ ಬಳಿ ಇರುವ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಎರಡು ದಿನಗಳ ಕಾಲ ನಡೆದ ಸ್ಪರ್ಧೆಯಲ್ಲಿ ಕಿಂಗ್ಸ್ ಆಫ್ ಕೂರ್ಗ್ನ ನೃತ್ಯ ಪಟುಗಳು ಒಟ್ಟು ಒಂಭತ್ತು ವಿಭಾಗಗಳಲ್ಲಿ ಭಾಗವಹಿಸಿ ಎಲ್ಲಾ ವಿಭಾಗಗಳಲ್ಲೂ ಬಹುಮಾನ ಪಡೆದುಕೊಳ್ಳುವುದರ ಮೂಲಕ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಂಡರು. ಮೆಗಾ ಗ್ರೂಪ್ ವಿಭಾಗದಲ್ಲಿ ೧೦ವರ್ಷದೊಳಗಿನ ಕಂಟೆAಪರರಿಯಲ್ಲಿ ಪ್ರಥಮ, ಫ್ರೀ ಸ್ಟೆöÊಲ್‌ನಲ್ಲಿ ಪ್ರಥಮ, ಜಾನಪದದಲ್ಲಿ ಪ್ರಥಮ, ೧೦ವರ್ಷ ಮೇಲ್ಪಟ್ಟ ಸೆಮಿ ಕ್ಲಾಸಿಕಲ್‌ನಲ್ಲಿ ದ್ವಿತೀಯ, ಮಿನಿ ಗ್ರೂಪ್ ವಿಭಾಗದಲ್ಲಿ ಹತ್ತು ವರ್ಷ ಮೇಲ್ಪಟ್ಟವರ ಜಾನಪದದಲ್ಲಿ ಪ್ರಥಮ, ಹಿಪ್ ಹಾಪ್‌ನಲ್ಲಿ ದ್ವಿತೀಯ, ೧೦ ವರ್ಷ ದೊಳಗಿನ ವಿಭಾಗದಲ್ಲಿ ಜಾನಪದ ಹಾಗೂ ಫ್ರೀ ಸ್ಟೆöÊಲ್‌ನಲ್ಲಿ ದ್ವಿತೀಯ, ಮುಕ್ತ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸುವದರೊಂದಿಗೆ ಒಟ್ಟು ೨೧೯೦ ಅಂಕ ಗಳಿಸಿದ್ದು, ಜಿಲ್ಲಾ ಮಟ್ಟದ ಚಾಂಪಿಯನ್, ರಾಜ್ಯಮಟ್ಟದಲ್ಲೂ ಚಾಂಪಿಯನ್ ಪಟ್ಟದೊಂದಿಗೆ ಸಮಗ್ರ ಚಾಂಪಿಯನ್‌ಶಿಪ್ ಪ್ರಶಸ್ತಿ ಗಳಿಸಿದೆ.
ವೈಯಕ್ತಿಕ ಪ್ರಶಸ್ತಿ
ಇದರೊಂದಿಗೆ ಕಿಂಗ್ಸ್ ಆಫ್ ಕೂರ್ಗ್ನ ನೃತ್ಯಪಟುಗಳು ವೈಯಕ್ತಿಕ ವಿಭಾಗದಲ್ಲೂ ಬಹುಮಾನ ಗಿಟ್ಟಿಸಿಕೊಂಡಿದ್ದಾರೆ. ೧೦ ವರ್ಷ ದೊಳಗಿನ ಟ್ರಿಯೋ ಫ್ರೀ ಸ್ಟೆöÊಲ್‌ನಲ್ಲ್ಲಿ ಇಂಚರ, ರಿಶಿತ, ವರ್ಣವಿ ಪ್ರಥಮ, ೧೩ ವರ್ಷದೊಳಗಿನ ಡ್ಯೂಯೆಟ್‌ನ ಸೆಮಿ ಕ್ಲಾಸಿಕಲ್‌ನಲ್ಲಿ ಜೀವಿತ, ಡಯಾನ ಜೋಡಿ ದ್ವಿತೀಯ, ೧೦ವರ್ಷ ದೊಳಗಿನ ಕಂಟೆAಪರರಿಯಲ್ಲಿ ಇಂಚರ, ರಿಶಿತ ಪ್ರಥಮ, ೧೩ ವರ್ಷದೊಳಗಿನ ಕಂಟೆAಪರರಿಯಲ್ಲಿ ಕುಡೆಕಲ್ ನಿಹಾಲ್ ಪ್ರಥಮ, ಸೆಮಿ ಕ್ಲಾಸಿಕಲ್‌ನಲ್ಲಿ ಜಿವಿತ ಪ್ರಥಮ, ೧೦ವರ್ಷದೊಳಗಿನ ಫ್ರೀ ಸ್ಟೆöÊಲ್‌ನಲ್ಲಿ ದಿಯಾ ದ್ವಿತೀಯ, ವೆಸ್ಟರ್ನ್ ಬಾಲಿವುಡ್‌ನಲ್ಲಿ ಗ್ರೀಷ್ಮ ದ್ವಿತೀಯ, ಸೆಮಿಕ್ಲಾಸಿಕಲ್‌ನಲ್ಲಿ ಅನುಕ್ತ ತೃತೀಯ, ೮ವರ್ಷದೊಳಗಿನ ಜಾನಪದದಲ್ಲಿ ಕುಡೆಕಲ್ ಸ್ಮರಣ್ ದ್ವಿತೀಯ, ಫ್ರೀ ಸ್ಟೆöÊಲ್‌ನಲ್ಲಿ ಹಂಸಿಕಾ ದ್ವಿತೀಯ, ೬ ವರ್ಷದೊಳಗಿನ ಫ್ರೀಸ್ಟೆöÊಲ್‌ನಲ್ಲಿ ಕನ್ನಿಕೆ ಪ್ರಥಮ, ಕಂಟೆAಪರರಿಯಲ್ಲಿ ನಿರನ್ ಪೂವಣ್ಣ ಪ್ರಥಮ ಸ್ಥಾನ ಗಳಿಸಿದ್ದಾರೆ. ಕಿಂಗ್ಸ್ ಆಫ್ ಕೂರ್ಗ್ನ ೧೬೮ ಮಂದಿ ನೃತ್ಯ ಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಕಿಂಗ್ಸ್ ಆಫ್ ಕೂರ್ಗ್ನ ನೃತ್ಯ ಸಂಯೋಜಕ ಮಹೇಶ್, ವೀರಾಜಪೇಟೆಯ ನಾಟ್ಯಾಂಜಲಿ ಸಂಸ್ಥೆಯ ಕಾವ್ಯಶ್ರೀ, ಬೆಂಗಳೂರಿನ ನವಿಲು ಕ್ರಿವ್ ಸಂಸ್ಥೆಯ ಸಂತೋಷ್ ಉತ್ತಮ ನೃತ್ಯ ಸಂಯೋಜಕ ಪ್ರಶಸ್ತಿ ಪಡೆದುಕೊಂಡರು. ತೀರ್ಪುಗಾರರಾಗಿ ಡ್ಯಾನ್ಸ್ ಸ್ಪೋರ್ಟ್ಸ್ ಅಸೋಸಿಯೇಶನ್ ರಾಜ್ಯ ಕಾರ್ಯದರ್ಶಿ ತರುಣ್ ರಾಜ್, ಕನ್ನಡ ಇಂಡಸ್ಟಿçಯ ಸಹಾಯಕ ನೃತ್ಯ ಸಂಯೋಜಕಿ ಭೂಮಿಕ ಹರ‍್ವೆ, ಇಂಡಿಯನ್ ಕ್ಲಾಸಿಕಲ್ ಪರಿಣಿತೆ ಲಿದಿನ ಪಿ. ಮೋಹನ್ ಕಾರ್ಯ ನಿರ್ವಹಿಸಿದರು.
ಪಠ್ಯೇತರ ಚಟುವಟಿಕೆ ಅಗತ್ಯ
ಸ್ಪರ್ಧಾ ಕಾರ್ಯಕ್ರಮವನ್ನು ಮಡಿಕೇರಿ ನಗರ ಸಭಾ ಆಯುಕ್ತ ಎಸ್.ವಿ. ರಾಮ್‌ದಾಸ್ ಉದ್ಘಾಟಿಸಿ ದರು. ಅತಿಥಿಗಳಾಗಿ ತರುಣ್‌ರಾಜ್, ಅಮ್ಮತ್ತಿಯ ನಾಟ್ಯಾಂಜಲಿ ಡ್ಯಾನ್ಸ್ ಇನ್ಸಿ÷್ಟಟ್ಯೂಟ್‌ನ ಹೇಮಾವತಿ ಕಾಂತರಾಜ್ ಇದ್ದರು.
ಸಮಾರೋಪ ಕಾರ್ಯಕ್ರದಲ್ಲಿ ಅತಿಥಿಯಾಗಿದ್ದ ಮಡಿಕೇರಿ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಮಕ್ಕಳು ಪಾಠ ಪ್ರವಚನದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳ ಬೇಕು, ಕ್ರೀಡೆ, ನೃತ್ಯ, ಸಂಗೀತ ಹೀಗೇ ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಲ್ಲಿ ಸಾಧನೆ ಮಾಡಲು ಸಾಧ್ಯವೆಂದು ಹೇಳಿದರು.ಉಪಾಧ್ಯಕ್ಷೆ ಸವಿತಾ ರಾಖೇಶ್ ಮಾತನಾಡಿ, ಪ್ರತಿಯೊಂದು ಮಕ್ಕಳಲ್ಲೂ ಪ್ರತಿಭೆಯಿರುತ್ತದೆ. ಅವುಗಳನ್ನು ಹೊರತರಬೇಕು, ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕು, ಡಿಕೆಡಿ ಬಹುಮಾನ ಗೆದ್ದಿರುವ ರಾಹುಲ್‌ನಂತೆ ಇನ್ನಷ್ಟು ಪ್ರತಿಭೆಗಳು ಸಾಧನೆ ತೋರುವಂತಾಗಲಿ ಎಂದು ಹಾರೈಸಿದರು.
ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾ ರೈ ಮಾತನಾಡಿ, ಸಂಸ್ಥೆಗಳನ್ನು ಹುಟ್ಟು ಹಾಕುವದು ಸುಲಭ, ಆದರೆ ಮುನ್ನಡೆಸಿಕೊಂಡು ಹೋಗುವದು ಕಷ್ಟಕರ, ಸಂಸ್ಥೆ ಹುಟ್ಟು ಹಾಕಿ ಅರ್ಧಕ್ಕೆ ಬಿಡಬಾರದು. ಇದರಿಂದ ಕಲಿಯಲು ಬರುವ ಮಕ್ಕಳಿಗೆ ತೊಂದರೆಯಾಗು ತ್ತದೆ, ಸಂಸ್ಥೆ ಮುನ್ನಡೆಯಲು ಪೋಷಕರ ಸಹಕಾರ ಇರಬೇಕು, ಪೋಷಕರೂ ಸಂಸ್ಥೆಯೊAದಿಗೆ ತೊಡಗಿಸಿಕೊಳ್ಳಬೇಕೆಂದು ಹೇಳಿದರು. ವೇದಿಕೆಯಲ್ಲಿ ಅತಿಥಿಗಳಾಗಿ ಉದ್ಯಮಿ ಸವಿತಾ ಅರುಣ್, ಅಮ್ಮೆಕಂಡ ಶಕುಂತಲಾ ಬೋಪಣ್ಣ, ಡ್ಯಾನ್ಸ್ ಸ್ಪೋರ್ಟ್ಸ್ ಅಸೋಸಿಯೇಶನ್ ಜಿಲ್ಲಾ ಕಾರ್ಯದರ್ಶಿ ಪಿ.ಎನ್.ದಿನೇಶ್, ಮೈಸೂರಿನ ಸಾಯಿ ಚಾರಿಟೇಬಲ್ ಟ್ರಸ್ಟ್ನ ಸಹನಾ ಇತರರಿದ್ದರು.