ಮಡಿಕೇರಿ,ನ.೩: ಇಲ್ಲಿನ ಮಹದೇವಪೇಟೆಯಲ್ಲಿರುವ ಶ್ರೀ ಬಸವೇಶ್ವರ ದೇವಾಲಯದಲ್ಲಿ ಕಾರ್ತಿಕ ಮಾಸದ ಪೂಜೋತ್ಸವ ಹಾಗೂ ದೀಪೋತ್ಸವ ಏರ್ಪಡಿಸಲಾಗಿದೆ.
ತಾ.೫ರಿಂದ ೯ರವರೆಗೆ ಪ್ರತಿದಿನ ರಾತ್ರಿ ೮ಗಂಟೆಯಿAದ ಪೂಜೆ ಪ್ರಾರಂಭವಾಗಲಿದ್ದು, ಸಂಕಲ್ಪ, ಗಣಪತಿ ಪೂಜೆ, ಷೋಡಷ ಉಪಚಾರ ಪೂಜೆ, ಅಷ್ಟೋತ್ತರ ಶತನಾಮಾವಳಿ, ದೀಪೋತ್ಸವ,ಮಹಾ ಮಂಗಳಾರತಿ ನೆರವೇರಲಿದೆ ಎಂದು ಪ್ರಕಟಣೆ ತಿಳಿಸಿದೆ.