ಮಡಿಕೇರಿ, ನ. ೩: ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ ಅವರಿಗೆ ಸಂಪುಟ ದರ್ಜೆ ಹುದ್ದೆ ನೀಡಿರುವ ಹಿನ್ನೆಲೆ ಕೊಡವ ಭಾಷಿಕ ಕೂಟ ವತಿಯಿಂದ ಇತ್ತೀಚೆಗೆ ನಗರದ ಜಿ.ಪಂ. ಕಟ್ಟಡದ ಅವರ ಕಚೇರಿಯಲ್ಲಿ ಕೊಡವ ಭಾಷಿಕ ಸಮುದಾಯಗಳ ಕೂಟದಿಂದ ನಿರ್ಮಿಸಲು ಉದ್ದೇಶಿಸಿರುವ ಸಮುದಾಯ ಭವನ ಹಾಗೂ ಜಾನಪದ ಸಾಂಸ್ಕೃತಿಕ ಕೇಂದ್ರಕ್ಕೆ ಹೊದ್ದೂರು ಗ್ರಾಮದಲ್ಲಿ ಗುರುತಿಸಲಾಗಿರುವ ಜಾಗವನ್ನು ಸರ್ವೆ ಮಾಡಿಸಿಕೊಡಬೇಕಾಗಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ಕೊಡವ ಭಾಷಿಕ ಕೂಟದ ಅಧ್ಯಕ್ಷ ಡಾ. ಮೇಚಿರ ಸುಭಾಷ್ ನಾಣಯ್ಯ, ಕಾರ್ಯದರ್ಶಿ ಕೂಡಂಡ ಸಬಾ ಸುಬ್ರಮಣಿ, ಸಮಿತಿ ಸದಸ್ಯರಾದ ತೋರೆರ ಕಾಶಿ ಕಾರ್ಯಪ್ಪ, ವೇದಪಂಡ ಕಿರಣ್, ಕಣಿಯಂಡ ಪ್ರಕಾಶ್, ಕೊಲೆಯಂಡ ಕಾರ್ಯಪ್ಪ, ಕಾಪಾಳರ ಮಿಲನ್, ಬೇಕಚಂಡ ಬೆಳ್ಯಪ್ಪ, ಮಲೆಯರ ಮುತ್ತಪ್ಪ ಇತರರು ಇದ್ದರು.