ಸೋಮವಾರಪೇಟೆ, ನ. ೨: ಇಲ್ಲಿನ ಶಾಸಕರ ಕಚೇರಿ ಆವರಣದಲ್ಲಿರುವ ಮರದ ಕೊಂಬೆಯೊAದು ಮುರಿದು ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ, ವಿದ್ಯುತ್ ತಂತಿ ತುಂಡಾಗಿ ಕೆಳಬಿದ್ದು ಸಾರ್ವಜನಿಕರು ಅಪಾಯದಿಂದ ಪಾರಾದ ಘಟನೆ ಇಂದು ಬೆಳಿಗ್ಗೆ ಸಂಭವಿಸಿತು.

ಶಾಸಕರ ಕಚೇರಿ ಆವರಣದಲ್ಲಿ ಇಂದು ಹಕ್ಕು ಪತ್ರ ವಿತರಣಾ ಕಾರ್ಯಕ್ರಮ ನಿಗದಿಗೊಳಿಸಿದ ಹಿನ್ನೆಲೆ ಗ್ರಾಮೀಣ ಭಾಗದಿಂದ ಬೆಳಿಗ್ಗೆಯೇ ಸಾರ್ವಜನಿಕರು ಆಗಮಿಸಿ, ಕಚೇರಿ ಆವರಣದಲ್ಲಿ ಕುಳಿತಿದ್ದರು. ಈ ಸಂದರ್ಭ ಮರದ ಕೊಂಬೆ ಮುರಿದು ವಿದ್ಯುತ್ ತಂತಿಯ ಸಹಿತ ಕೆಳಬಿದ್ದಿತು.

ಕೊಂಬೆ ಬಿದ್ದ ಒಂದು ಅಡಿ ದೂರದಲ್ಲಿ ನಾಲ್ಕೆöÊದು ಮಹಿಳೆಯರು ಕುಳಿತಿದ್ದರು. ಕೊಂಬೆ ಸಹಿತ ವಿದ್ಯುತ್ ತಂತಿ ಬಿಳುತ್ತಿದ್ದಂತೆ ಗಾಬರಿಯಿಂದ ಎದ್ದು ಓಡಿದರು. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಲಿಲ್ಲ. ತಕ್ಷಣ ವಿದ್ಯುತ್ ಇಲಾಖೆಗೆ ಮಾಹಿತಿ ನೀಡಿದ ಮೇರೆ, ಸ್ಥಳಕ್ಕಾಗಮಿಸಿದ ಸಿಬ್ಬಂದಿಗಳು ವಿದ್ಯುತ್ ಸ್ಥಗಿತಗೊಳಿಸಿ ತಂತಿಯನ್ನು ಸರಿಪಡಿಸಿದರು.