ಶನಿವಾರಸಂತೆ, ನ. ೨: ಹೋಬಳಿ ವ್ಯಾಪ್ತಿಯಲ್ಲಿ ವರುಣನ ಕಣ್ಣಾಮುಚ್ಚಾಲೆ ಆಟದಿಂದ ಕಾಫಿ ಮತ್ತು ಕಾಳುಮೆಣಸು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆಗಾರರ ಜೀವಾಳವಾದ ಬೆಳೆಗಳು ಹಣ್ಣಾಗಿದ್ದು, ನೆಲಕಚ್ಚುತ್ತಿವೆ. ಕಾಪಾಡಿಕೊಳ್ಳುವ ದಾರಿ ಕಾಣದೇ ಕಂಗಾಲಾಗಿದ್ದಾರೆ.

ಮುAಗಾರು ಮಳೆಗಾಲದ ಅವಧಿ ಮುಗಿದಿದ್ದು, ಆಗಾಗ್ಗೆ ಅಡ್ಡ ಮಳೆಯಾಗುವುದು ವಾಡಿಕೆ. ಆದರೆ ಒಂದಾದ ಮೇಲೊಂದರAತೆ ಚಂಡಮಾರುತ ಅಪ್ಪಳಿಸುತ್ತಿರುವ ಪರಿಣಾಮ ಸತತವಾಗಿ ಹಗಲೂ ರಾತ್ರಿಯೂ ನಿತ್ಯ ಮಳೆ ಸುರಿಯುತ್ತಿರು ವುದು ಕೃಷಿಕರ ಚಿಂತೆಗೆ ಕಾರಣವಾಗಿದೆ.

ಸೋನೆ ಮಳೆಯಂತೆ ಸುರಿಯುತ್ತಿದ್ದು, ಜನವರಿಯಿಂದಲೇ ಮಳೆಯಾಗಿರುವ ಕಾರಣ ಅರೇಬಿಕಾ ಕಾಫಿ ಹೂ ಬೇಗ ಅರಳಿದ್ದು, ೩ ಬಾರಿ ಅರಳಿತ್ತು. ಅವಧಿಗೆ ಮುನ್ನವೇ ಗಿಡದಲ್ಲಿ ಕಾಫಿ ಹಣ್ಣಾಗಿದೆ. ಕೊಯ್ದು ಪಲ್ಪರ್ ಮಾಡಿ ಒಣಗಿಸಲೂ ಮಳೆ ಬಿಡುತ್ತಿಲ್ಲ. ವಾಡಿಕೆ ಅಡ್ಡ ಮಳೆ ಬದಲು ಸೈಕ್ಲೋನ್ ಮಳೆಯಿಂದಾಗಿ ಬೆಳೆ ನಷ್ಟವಾಗಿದೆ. ಉತ್ತಮ ದರ ದೊರೆಯುವ ಸಮಯದಲ್ಲಿ ಮಳೆ ಕೃಷಿಕರ ಬದುಕಲ್ಲಿ ಚೆಲ್ಲಾಟವಾಡುತ್ತಿದೆ ಎಂದು ಶಿಡಿಗಳಲೆ ಗ್ರಾಮದ ಕೃಷಿಕ ಎಸ್.ಎಂ. ಉಮಾಶಂಕರ್ ಹಾಗೂ ಇತರ ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ.

ಮಳೆ ಆರ್ಭಟಕ್ಕೆ ಸಿಲುಕಿ ಗಿಡದಲ್ಲಿ ೩ ಬಾರಿ ಹೂ ಅರಳಿ ದಾಖಲೆ ನಿರ್ಮಿಸಿದೆ. ಕಾಯಿ ಕಟ್ಟುವ ಮೊದಲೇ ಮತ್ತೆ ಮಳೆಯಾಗಿ ಹೂವು ಅರಳಿದ್ದು, ಪ್ರಯೋಜನವಾಗುತ್ತಿಲ್ಲ. ಅವಧಿಗೂ ಮುನ್ನವೇ ಅರೇಬಿಕಾ ಕಾಫಿ ಹಣ್ಣಾಗಿ ಸಂಪೂರ್ಣ ಉದುರುವ ಸ್ಥಿತಿ ತಲುಪಿದೆ. ಕೊಳೆ ರೋಗ ಆವರಿಸಿ ಬೆಳೆ ಮಣ್ಣುಪಾಲಾಗುತ್ತಿದೆ. ಕೊಯ್ಲು ಮಾಡಿರುವ ಕೆಲ ಬೆಳೆಗಾರರು ಕಾಫಿ ಒಣಗಿಸಲಾಗದೇ ಹಾನಿಗೀಡಾಗುತ್ತಿದೆ.

ನಿರಂತರ ಮಳೆಯಿಂದ ಕಾಫಿ ಬೆಳೆ ಜೊತೆಗೆ ಕಾಣುಮೆಣಸು ಕೂಡ ಅಲ್ಲಲ್ಲಿ ಉದುರುತ್ತಿದೆ. ಸೊರಗು ಮತ್ತು ಕೊಳೆ ರೋಗದಿಂದ ಬಳ್ಳಿ ಸಾಯುತ್ತಿದೆ. ಅಕಾಲಿಕ ಮಳೆ ಕಾಫಿ ಬೆಳೆಗಾರರಿಗೆ ತೋಟಕ್ಕೆ ಗೊಬ್ಬರ ಹಾಕಲು, ಕಚಡ ಮಾಡಿಸಲು ಬಿಡುತ್ತಿಲ್ಲ. ಕೊಯ್ಲಿಗೆ ಮತ್ತು ಬೇಳೆ ಒಣಗಿಸಲು ತೊಡಕಾಗಿದ್ದು, ಹವಾಮಾನ ವೈಪರೀತ್ಯದಿಂದ ದಿಕ್ಕು ತೋಚದಂತಾಗಿದೆ.

ಕಾಫಿ ಇಳುವರಿಯೂ ಕಡಿಮೆ ಇದೆ. ಕಾಫಿಗೆ ಇದೀಗ ಉತ್ತಮ ದರವಿದ್ದರೂ ಮಳೆಯಿಂದ ಅರೇಬಿಕಾ ಕಾಫಿ ಬೆಳೆ ನಷ್ಟವಾಗುತ್ತಿದೆ. ಎಲೆ ತುಕ್ಕು ರೋಗ ಕಾಣಿಸುತ್ತಿದೆ. ಇತರ ಕೆಲಸ ಮಾಡಿಕೊಳ್ಳಲೂ ಮಳೆ ಬಿಡುತ್ತಿಲ್ಲ. ರೋಬಸ್ಟಾ ಕಾಫಿ ಬೆಳೆದ ವರಿಗಿಂತ ಅರೇಬಿಕಾ ಬೆಳೆಗಾರರಿಗೆ ಅಧಿಕ ಸಮಸ್ಯೆ ಇದೆ ಎಂದು ಶಿಡಿಗಳಲೆ ಗ್ರಾಮದ ಬೆಳೆಗಾರ ಎಸ್.ಎಂ. ಉಮಾಶಂಕರ್ ಹೇಳುತ್ತಾರೆ.