ಮುಳ್ಳೂರು, ಅ. ೩ : ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಸ್ನೇಹಿ ಜ್ಞಾನದ ದೀಪಾವಳಿ ಆಚರಣೆ ಕುರಿತು ಅರಿವು ಕಾರ್ಯಗಾರ ಮತ್ತು ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ‘‘ಪಟಾಕಿ ತ್ಯಜಿಸೋಣ ಪುಸ್ತಕ ಕೊಳ್ಳೋಣ’’ ಮತ್ತು ಓದೋಣ’ ಎಂಬ ಧ್ಯೇಯ ವಾಕ್ಯದೊಂದಿಗೆ ಶಾಲೆಯ ಸಹ ಶಿಕ್ಷಕ ಸಿ.ಎಸ್.ಸತೀಶ್ ಅವರ ಪರಿಕಲ್ಪನೆ ಮತ್ತು ಮಾರ್ಗದರ್ಶನದಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.

ಪರಿಸ್ನೇಹಿ ದೀಪಾವಳಿ ಆಚರಣೆ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ವಿವಿಧ ಬಣ್ಣಬಣ್ಣದ ಬೆಳಕಿನ ದೀಪಗಳನ್ನು ಹಚ್ಚಿ ಆನಂದ ಪಟ್ಟರಲ್ಲದೆ ಪಟಾಕಿ ರಹಿತ ಪರಸರ ಸ್ನೇಹಿ ದೀಪಾವಳಿಯನ್ನು ಪರಿಸರಕ್ಕೆ ಹಾನಿಯಾಗದಂತೆ ಸಾಂಪ್ರದಾಯಕವಾಗಿ ಬೆಳಕಿನ ಹಬ್ಬವನ್ನು ಆಚರಿಸಬಹುದೆಂದು ಸಾಬೀತು ಪಡಿಸಿದರು. ಕಾರ್ಯಾಗಾರದಲ್ಲಿ ಶಿಕ್ಷಕರು ಪಟಾಕಿ ಹಚ್ಚುವುದರಿಂದ ಕಣ್ಣು ಕಳೆದುಕೊಳ್ಳುವುದು, ಇತರೆ ಅವಘಡಗಳಾಗುತ್ತಿರುವುದು, ಪ್ರತಿವರ್ಷ ದೀಪಾವಳಿ ಹಬ್ಬದಲ್ಲಿ ಪಟಾಕಿಯಿಂದ ಅದೆಷ್ಟೋ ಮಕ್ಕಳಿಗೆ ಅವಘಡಗಳಾಗುತ್ತಿರುವುದರಿಂದ ಮಕ್ಕಳು ಪಟಾಕಿಯಿಂದ ದೂರ ಇರುವಂತೆ ತಿಳಿಸಿದರು. ದೀಪಾವಳಿ ಬೆಳಕಿನ ಹಬ್ಬವಾಗಿದ್ದು ಬಣ್ಣ ಬಣ್ಣದ ಆಕಾಶ ಬುಟ್ಟಿಗಳನ್ನು ಮನೆಯಲ್ಲಿರಿಸಿ ಅಲಂಕರಿಸಿ ಆಸ್ವಾದಿಸುವ ಹಬ್ಬ ಇದು ತ್ಯಾಗ ಬಲಿದಾನಗಳನ್ನು ನೆನಪಿಸಿಕೊಳ್ಳುವ ಪುರಾಣ, ಇತಿಹಾಸ, ಕತೆಗಳನ್ನು ಮೆಲಕು ಹಾಕುವ ಹಬ್ಬವಾಗಿರುವುದರಿಂದ ಮನೆಯಲ್ಲಿ ಸಾಂಪ್ರದಾಯಕವಾಗಿ ಆನಂದ ಸಂಭ್ರಮದಿAದ ಪರಿಸರ ಸ್ನೇಹಿ ದೀಪಾವಳಿ ಹಬ್ಬವನ್ನು ಆಚರಿಸುವಂತೆ ವಿದ್ಯಾರ್ಥಿಗಳಿಗೆ ಶಿಕ್ಷಕರು ತಿಳಿಸಿದರು.