ಗೋಣಿಕೊಪ್ಪ ವರದಿ, ನ. ೩: ಪೊನ್ನಂಪೇಟೆ ಜೆಸಿಐ ಗೋಲ್ಡನ್ ವತಿಯಿಂದ ತಾ. ೬ ರಂದು ಟ್ರಸ್ಸರ್ ಹಂಟ್ ಜೀಪು ರ್ಯಾಲಿ ಆಯೋಜಿಸಲಾಗಿದೆ.
ಬೆಸಗೂರು, ಬಿಳೂರು, ಪೊನ್ನಪ್ಪಸಂತೆ, ನಲ್ಲೂರು ಗ್ರಾಮದಲ್ಲಿ ಸ್ಪರ್ಧೆ ನಡೆಯಲಿದ್ದು, ಸುಮಾರು ೧೭.೦೨ ಕಿ. ಮೀ. ಟ್ರಾö್ಯಕ್ನಲ್ಲಿ ಭಾಗವಹಿಸಬೇಕಿದೆ. ಟೈಂ ಸ್ಪೀಡ್ ಡಿಸ್ಟೆನ್ಸ್ ತಂತ್ರಜ್ಞಾನದ ವಿಶೇಷತೆ ಕೂಡ ಇರಲಿದೆ.
ಬೆಸಗೂರು ಜಿಎಲ್ಪಿ ಶಾಲಾ ಆವರಣದಿಂದ ರ್ಯಾಲಿ ಪ್ರಾರಂಭಗೊAಡು, ಅಲ್ಲಿಯೆ ಕೊನೆಗೊಳ್ಳುತ್ತದೆ. ಬೆಳಗ್ಗೆ ೮ ಗಂಟೆಗೆ ಸ್ಪರ್ಧೆಗೆ ಚಾಲನೆ ನೀಡಲಾಗುತ್ತದೆ. ಡಿ.ಐ, ಎಂ.ಡಿಐ, ಪಿಕ್ ಅಪ್, ಕಮಾಂಡರ್, ಜುಪ್ಸಿ, ಮೇಜರ್, ತಾರ್ ವಾಹನಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ನವೆಂಬರ್ ೫ ರ ಒಳಗೆ ಹೆಸರು ನೋಂದಾಯಿಸಿಕೊಳ್ಳಬೇಕಿದ್ದು, ಮೊದಲು ನೋಂದಾಯಿಸಿಕೊAಡ ೩೦ ಸ್ಪರ್ಧಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ವಿಜೇತರಿಗೆ ಆಕರ್ಷಕ ಟ್ರೋಫಿ, ನಗದು ಬಹುಮಾನ ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ ೯೬೧೧೬೪೦೫೫೨, ೯೪೪೮೬೪೭೪೪೪ ಸಂಖ್ಯೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಪೊನ್ನಂಪೇಟೆ ಜೆಸಿಐ ಗೋಲ್ಡನ್ ಅಧ್ಯಕ್ಷ ಪಾರುವಂಗಡ ದಿಲನ್ ಚಂಗಪ್ಪ ಹೇಳಿಕೆಯಲ್ಲಿ ತಿಳಿಸಿದ್ದಾರೆ.