ಮಡಿಕೇರಿ, ನ. ೨: ಪ್ರಸಕ್ತ ಸಾಲಿನ ಸಂಶೋಧನಾ-ಅಧ್ಯಯನ ಫೆಲೋಶಿಪ್ ತಯಾರಿಗಾಗಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯಿಂದ ಅರ್ಹ ಸಂಶೋಧಕರಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಸಂಶೋಧಕರಿಗೆ ವಿದ್ಯಾರ್ಹತೆಯ ನಿರ್ಬಂಧ ಇರುವುದಿಲ್ಲ. ಈ ಕ್ಷೇತ್ರದಲ್ಲಿ ಅರೆಭಾಷೆ ಕಲಾವಿದರೂ ಸೇರಿದಂತೆ ಆಸಕ್ತರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವವರು ಅಕಾಡೆಮಿಯಿಂದ ಈ ಕ್ಷೇತ್ರದಲ್ಲಿ ಈ ಹಿಂದೆ ಯಾವುದೇ ಅವಕಾಶ ಪಡೆದವರಾಗಿರಬಾರದು. ಕೇಂದ್ರ, ರಾಜ್ಯ ಸರ್ಕಾರದ ಇಲಾಖೆಯಲ್ಲಿ ಸಂಘಟನೆಗಳಲ್ಲಿ, ಉದ್ದಿಮೆಗಳಲ್ಲಿ ವಿಶ್ವವಿದ್ಯಾಲಯಗಳಲ್ಲಿ ಯು.ಜಿ.ಸಿ. ಅನುದಾನಿತ ಕಾಲೇಜುಗಳಲ್ಲಿ ನೌಕರಿ ಮಾಡುತ್ತಿದ್ದಲ್ಲಿ ಅರ್ಜಿಯನ್ನು ಸಂಬAಧಿಸಿದ ಮೇಲಾಧಿಕಾರಿಗಳ ಮೂಲಕ ಸಲ್ಲಿಸಬೇಕು.

ಆಯ್ಕೆಯಾದ ಅರ್ಜಿಗಳನ್ನು ಪರಿಶೀಲಿಸಿ, ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಅಪೂರ್ಣವಾದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಪೂರ್ಣವಾಗಿ ಕ್ಷೇತ್ರಕಾರ್ಯ ಆಧರಿಸಿಯೇ ನಡೆಯಬೇಕು. ಆಯ್ಕೆಮಾಡಿಕೊಂಡ ವಿಷಯ ಮತ್ತು ಭೌಗೋಳಿಕ ಕ್ಷೇತ್ರ ವ್ಯಾಪ್ತಿಯ ಅಪೇಕ್ಷಾಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಬೇಕು.

ಅಕಾಡೆಮಿಯು ಗೊತ್ತುಮಾಡುವ ವಿಷಯಗಳಾದ ಗ್ರಾಮ ಅಧ್ಯಯನ, ಕೌಟುಂಬಿಕ ಅಧ್ಯಯನ, ಅರೆಭಾಷಿಗರ ಬಳಿ ಪದ್ಧತಿ, ಐನ್‌ಮನೆ, ಅರೆಭಾಷೆ ಪ್ರದೇಶದ ಆರಾಧನೆಗಳು, ಅರೆಭಾಷೆ ಪ್ರದೇಶದ ಸ್ಥಳನಾಮ, ಅರೆಭಾಷೆಯ ಜನಪದ ಆಹಾರ, ಅರೆಭಾಷೆ ಪ್ರದೇಶದ ಕುಣಿತಗಳು, ಅರೆಭಾಷೆ ಜಾನಪದ, ಅರೆಭಾಷೆ ಪ್ರದೇಶದ ಪಾರಂಪರಿಕ ಕೃಷಿ, ಅರೆಭಾಷೆ ಪ್ರದೇಶದ ಕೋಟೆಗಳು, ಕಟ್ಟೆಮನೆಗಳು, ಅರೆಭಾಷಿಕರ ಗೌಡತಿಕೆ, ನ್ಯಾಯ ಪದ್ಧತಿ, ಪಾರಂಪರಿಕೆ ವೈದ್ಯ ಪದ್ಧತಿಯನ್ನು ವಿಷಯ ತಜ್ಞರ ಮಾರ್ಗದರ್ಶನದಂತೆ ನಡೆಸುವುದು.

ಅಕಾಡೆಮಿ ನಿಯೋಜಿಸುವ ಪರಿಣಿತ ತಜ್ಞರು ನೀಡುವ ವಿಷಯಕ್ಕೆ ಸಂಬAಧಿಸಿದAತೆ ಕನಿಷ್ಟ ೫ ಪುಟಗಳ ಸಂಶೋಧನಾ ಸಾರಲೇಖ, ಟಿಪ್ಪಣಿಯನ್ನು ಅಕಾಡೆಮಿಯು ನೀಡುವ ಅರ್ಜಿಯೊಂದಿಗೆ ಸಲ್ಲಿಸುವುದು. ಒಬ್ಬರು ಒಂದಕ್ಕಿAತ ಹೆಚ್ಚು ಸಾರಲೇಖವನ್ನು ಕಳುಹಿಸಬಹುದು. ಆಯ್ಕೆಯಾದವರು ಆಯ್ಕೆಯಾದ ತಿಂಗಳಿAದ ಆರು ತಿಂಗಳ ಅವಧಿಯೊಳಗೆ ಸಂಶೋಧನೆ, ಅಧ್ಯಯನವನ್ನು ಪೂರ್ಣಗೊಳಿಸಿ ಪ್ರಬಂಧ ರೂಪದಲ್ಲಿ ಅಕಾಡೆಮಿಗೆ ಸಲ್ಲಿಸುವುದು. ಆಯ್ಕೆಯಾದ ಪ್ರತಿಯೊಬ್ಬ ಸಂಶೋಧಕ, ಅಧ್ಯಯನಕಾರರಿಗೆ ಒಟ್ಟು ೫೦ ಸಾವಿರ ರೂಪಾಯಿಗಳ ಅಧ್ಯಯನ ವೇತನ ನೀಡಲಾಗುತ್ತದೆ.

ಅಕಾಡೆಮಿಯಿಂದ ಅಂಚೆ ಮೂಲಕ ಅಥವಾ ಖುದ್ದಾಗಿ ಫೆಲೋಶಿಪ್ ಅಪೇಕ್ಷಾಪತ್ರಗಳನ್ನು ಪಡೆಯುವುದು. ಅಪೇಕ್ಷಾಪತ್ರವನ್ನು ನಿಖರ ಮಾಹಿತಿಯೊಂದಿಗೆ ಭರ್ತಿ ಮಾಡಿ ನವೆಂಬರ್ ೨೦ ರೊಳಗೆ ಅಕಾಡೆಮಿ ಕಾರ್ಯಾಲಯಕ್ಕೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ ರಿಜಿಸ್ಟಾçರ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕಾಫಿ ಕೃಪಾ ಕಟ್ಟಡ, ಮಡಿಕೇರಿ ಮೊ. ೬೩೬೨೫೨೨೬೭೭ ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ರಿಜಿಸ್ಟಾçರ್ ತಿಳಿಸಿದ್ದಾರೆ.

ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ

ಪ್ರಸಕ್ತ ಸಾಲಿಗೆ ಕೊಡಗು ಜಿಲ್ಲೆಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕ-ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಹಿಂದುಳಿದ ವರ್ಗಗಳ ಪ್ರವರ್ಗ-೧, ೨ಎ, ೨ಬಿ, ೩ಎ ಹಾಗೂ ೩ಬಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವರ್ಗ ಮತ್ತು ಇತರೆ ಜನಾಂಗಕ್ಕೆ ಸೇರಿದ ಅರ್ಹ ಅಭ್ಯರ್ಥಿಗಳಿಂದ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಲು ಅವಧಿ ವಿಸ್ತರಿಸಲಾಗಿದೆ.

ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯ ಮಿತಿ ಪ್ರವರ್ಗ-೧, ಎಸ್.ಸಿ ಮತ್ತು ಎಸ್.ಟಿ. ರೂ. ೨.೫೦ ಲಕ್ಷ, ಪ್ರವರ್ಗ-೨ಎ, ೨ಬಿ, ೩ಎ, ೩ಬಿ, ಇತರೆ ಹಿಂದುಳಿದ ವರ್ಗ ರೂ. ೧ ಲಕ್ಷ ಆಗಿರುತ್ತದೆ. ವಿದ್ಯಾರ್ಥಿ ನಿಲಯಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ನವೆಂಬರ್ ೨೦ ಕೊನೆಯ ದಿನವಾಗಿದೆ.

ಹೆಚ್ಚಿನ ವಿವರಗಳಿಗೆ ಇಲಾಖಾ ವೆಬ್‌ಸೈಟ್ ತಿತಿತಿ.bಛಿತಿಜ. ಞಚಿಡಿಟಿಚಿಣಚಿಞಚಿ.gov.iಟಿ ಅನ್ನು ನೋಡಬಹುದು. ಅರ್ಜಿ ಸಲ್ಲಿಸಲು ತಾಂತ್ರಿಕ ತೊಂದರೆಗಳಾದಲ್ಲಿ bಛಿತಿಜ.hosಣeಟs@ಞಚಿಡಿಟಿಚಿಣಚಿಞಚಿ.gov.iಟಿ ಗೆ ಇ-ಮೇಲ್ ಮುಖಾಂತರ ಅಗತ್ಯ ದಾಖಲೆಗಳೊಂದಿಗೆ ಸಹಾಯವಾಣಿ ದೂ. ೦೮೦-೮೦೫೦೩೭೦೦೦೬ ಸಂಪರ್ಕಿಸಬಹುದು.

ಹೆಚ್ಚಿನ ಮಾಹಿತಿಗೆ ಜಿಲ್ಲಾ ಕಚೇರಿ ಮತ್ತು ತಾಲೂಕು ಮಟ್ಟದ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಮೊಬೈಲ್ ಸಂಖ್ಯೆ ಜಿಲ್ಲಾ ಕಚೇರಿ ಮಡಿಕೇರಿ ಮೊ. ೯೪೪೮೨೦೫೯೧೯, ಮಡಿಕೇರಿ ತಾಲೂಕು ಕಚೇರಿ ಮೊ. ೯೪೮೦೩೫೬೪೦೯, ವೀರಾಜಪೇಟೆ ತಾಲೂಕು ಕಚೇರಿ ಮೊ. ೮೭೬೨೪೭೬೭೯೦, ಸೋಮವಾರಪೇಟೆ ತಾಲೂಕು ಕಚೇರಿ ಮೊ. ೮೬೬೦೦೧೯೦೪೨ ನ್ನು ಕಚೇರಿ ವೇಳೆಯಲ್ಲಿ ಕರೆ ಮಾಡಿ ಪಡೆಯಬಹುದಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.

ವಿದ್ಯಾರ್ಥಿ ವೇತನಕ್ಕೆ

೨೦೨೧-೨೨ನೇ ಸಾಲಿನ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮೆಟ್ರಿಕ್‌ಪೂರ್ವ ವಿದ್ಯಾರ್ಥಿ ವೇತನಕ್ಕಾಗಿ ಇಲಾಖಾ ವೆಬ್ ಸೈಟ್ ತಿತಿತಿ.ssಠಿ.ಞಚಿಡಿಟಿಚಿಣಚಿಞಚಿ.gov.iಟಿ ಅಥವಾ ಶಾಲೆಯ ಸ್ಯಾಟ್ಸ್ ವೆಬ್‌ಸೈಟ್ hಣಣಠಿ://sಣs.ಞಚಿಡಿಟಿಚಿಣಚಿಞಚಿ.gov.iಟಿ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕಾಗಿ (ssಠಿ.ಠಿosಣmಚಿಣಡಿiಛಿ.ಞಚಿಡಿಟಿಚಿಣಚಿಞಚಿ.gov.iಟಿ) ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ವಿದ್ಯಾರ್ಥಿಯ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ (ಆದಾಯಮಿತಿ ಮೆಟ್ರಿಕ್ ನಂತರದ ಕೋರ್ಸುಗಳಿಗೆ ೨.೫೦ ಲಕ್ಷ ಮತ್ತು ಮೆಟ್ರಿಕ್ ಪೂರ್ವ ಆದಾಯ ಮಿತಿ ೧ ರಿಂದ ೮ ತರಗತಿಗೆ ೨.೫೦ ಲಕ್ಷ ಮತ್ತು ೯ ರಿಂದ ೧೦ನೇ ತರಗತಿಗೆ ೬ ಲಕ್ಷ), ವಿದ್ಯಾರ್ಥಿಯ ಬ್ಯಾಂಕ್ ಪುಸ್ತಕದ ಜೆರಾಕ್ಸ್ ಪ್ರತಿ, ಆಧಾರ್ ಕಾರ್ಡ್ (ಕಡ್ಡಾಯವಾಗಿ ಆದಾರ್ ಸೀಡಿಂಗ್ ಮತ್ತು ಎನ್‌ಪಿಸಿಐ ಮ್ಯಾಪಿಂಗ್ ಮಾಡಿಸಿರಬೇಕು.

ಕಡ್ಡಾಯವಾಗಿ ಚಾಲ್ತಿಯಲ್ಲಿರುವ ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ, ಹಿಂದಿನ ವರ್ಷದ ಮಾರ್ಕ್ಸ್ ಕಾರ್ಡ್ ಪ್ರತಿ, ಇತ್ತೀಚಿನ ಭಾವಚಿತ್ರ, ಅಧ್ಯಯನ/ಬೋನಾಪೈಡ್ ಪ್ರಮಾಣ ಪತ್ರ ಮೆಟ್ರಿಕ್ ನಂತರದ ಕೋರ್ಸ್ಗಳಿಗೆ, ಶುಲ್ಕ ರಶೀದಿ ಮೆಟ್ರಿಕ್ ನಂತರದ ಕೋರ್ಸ್ಗಳಿಗೆ, ತಂದೆ/ತಾಯಿ/ಪೋಷಕರ ಆಧಾರ್ ದಾಖಲಾತಿ, ಆದಾಯ ಮಿತಿ ೨.೫೦ ಲಕ್ಷಕ್ಕಿಂತ ಹೆಚ್ಚು ೧೦ ಲಕ್ಷ ರೂ. ಒಳಗಿರುವ ಸಿಇಟಿ ಮೂಲಕ ಎಂಬಿಬಿಎಸ್, ಬಿ.ಡಿ.ಎಸ್. ಕೋರ್ಸ್ಗಳಿಗೆ ಆಯ್ಕೆಯಾಗುವ ವಿದ್ಯಾರ್ಥಿಗಳು ಮಾತ್ರ ಸರ್ಕಾರಿ, ಅನುದಾನಿತ, ಅನುದಾನರಹಿತ ಖಾಸಗಿ ಮತ್ತು ಡೀಮ್ಸ್ ವಿಶ್ವವಿದ್ಯಾನಿಲಯದ ಕಾಲೇಜು, ಸಂಸ್ಥೆಗಳಲ್ಲಿ ಪ್ರವೇಶ ಪಡೆದಿದ್ದಲ್ಲಿ ಅಂತಹ ವಿದ್ಯಾರ್ಥಿಗಳು ಶೇ.೧೦೦ ರಷ್ಟು ಆಯಾಯ ಸಂಸ್ಥೆಗಳಿಗೆ ನಿಗದಿಪಡಿಸಿದ ಶುಲ್ಕ ಪಡೆಯಲು ಅರ್ಹರಿರುತ್ತಾರೆ.

ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ. ೦೮೦-೪೪೫೫೪೪೫೫ ಮತ್ತು ಸೋಮವಾರಪೇಟೆ ರವರ ಕಚೇರಿ ದೂರವಾಣಿ ಸಂಖ್ಯೆ: ೯೪೮೦೮೪೩೧೫೬/ ೦೮೨೭೬- ೨೮೧೧೧೫ ನ್ನು ಸಂಪರ್ಕಿಸಬಹುದು ಎಂದು ಸೋಮವಾರಪೇಟೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.