ಕುಶಾಲನಗರ: ಚಿತ್ರನಟ ಪುನೀತ್ ರಾಜ್ಕುಮಾರ್ ಅಕಾಲ ಮರಣದ ಹಿನ್ನೆಲೆ ಕುಶಾಲನಗರದಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ಮೌನಾಚರಣೆ ನಡೆಸಿ ಶ್ರದ್ಧಾಂಜಲಿ ಅರ್ಪಿಸಿದರು.
ಕುಶಾಲನಗರ ಪ್ರಜ್ಞಾವಂತ ನಾಗರಿಕ ವೇದಿಕೆ ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿ ಪುನೀತ್ ರಾಜ್ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಂತರ ಮೌನಾಚರಣೆ ನಡೆಸಿ ಶ್ರದ್ಧಾಂಜಲಿ ಅರ್ಪಿಸಿದರು. ವೇದಿಕೆಯ ಸಂಚಾಲಕ ವಿ.ಪಿ. ಶಶಿಧರ್ ಮತ್ತು ವಿವಿಧ ಸಂಘ-ಸAಸ್ಥೆಗಳ ಪ್ರಮುಖರು ಇದ್ದರು.
ಕುಶಾಲನಗರ ಕನ್ನಡಾಂಬೆ ಆಟೋ ಚಾಲಕರು ಮಾಲೀಕರ ಸಂಘ, ಎಸ್ ಡಿಪಿಐ ಸಂಘಟನೆ ಪ್ರಮುಖರು ಶ್ರದ್ಧಾಂಜಲಿ ಅರ್ಪಿಸಿದರು.
ಕರ್ನಾಟಕ ಕಾವಲು ಪಡೆ ವತಿಯಿಂದ ಪುನೀತ್ ರಾಜ್ಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು. ಜಿಲ್ಲಾಧ್ಯಕ್ಷ ಎಂ. ಕೃಷ್ಣ ಮತ್ತಿತರರಿದ್ದರು.ವೀರಾಜಪೇಟೆ: ಪುನೀತ್ ರಾಜಕುಮಾರ್ ಅವರ ಗೌರವಾರ್ಥ ನೃತ್ಯ ಶಾಲೆಯ ಮಕ್ಕಳು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.
ವೀರಾಜಪೇಟೆ ನಗರದ ಕಾರು ನಿಲ್ದಾಣ ಸಮೀಪದ ಎವರ್ ಗ್ರೀನ್ ಕೂರ್ಗ್ ಕಲಾ ಮಂದಿರ್ ಡಿ. ಡ್ಯಾನ್ಸ್ ರೆವಲ್ಯೂಷನ್ ನೃತ್ಯ ಶಾಲೆಯ ವತಿಯಿಂದ ನೃತ್ಯ ಶಾಲೆಯ ಸಭಾಂಗಣದಲ್ಲಿ ಚಿತ್ರನಟ ಪುನೀತ್ ರಾಜಕುಮಾರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಮುಖ್ಯ ತರಬೇತುದಾರ ಹೆಚ್.ಎಸ್. ಚೇತನ್, ವ್ಯವಸ್ಥಾಪಕ ಗೌತಮ್ ಮತ್ತು ನೃತ್ಯ ಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು.ಗುಡ್ಡೆಹೊಸೂರು: ಇಲ್ಲಿನ ವರ್ತಕರು ಆಕಾಲಿಕವಾಗಿ ಸಾವನ್ನಪ್ಪಿದ ಪುನೀತ್ ರಾಜ್ಕುಮಾರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಪುನೀತ್ ಭಾವಚಿತ್ರ ಇರಿಸಿ ಮೌನಾಚರಣೆ ಸಲ್ಲಿಸಿ ಸಂತಾಪ ಸೂಚಿಸಿದರು.
ಈ ಸಂದರ್ಭ ಇಲ್ಲಿನ ಅಂಬಾಡಿ ರವಿ, ರವಿಕುಮಾರ್, ಐಲಪಂಡ ಕುಶಾಲಪ್ಪ, ರಮೇಶ್, ಗಣೇಶ್ ಮುಂತಾದವರು ಹಾಜರಿದ್ದರು.ಮಡಿಕೇರಿ: ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಪಕ್ಷ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಸಂಘದ ವತಿಯಿಂದ ಪುನೀತ್ ರಾಜ್ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಟನೆ ಜೊತೆಯಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಪುನೀತ್ ರಾಜ್ಕುಮಾರ್ ಅಗಲಿಕೆ ಕರ್ನಾಟಕಕ್ಕೆ ತುಂಬಲಾಗದ ನಷ್ಟವಾಗಿದೆ ಎಂದು ಅಧ್ಯಕ್ಷ ಕೆ.ಬಿ. ರಾಜು ಹೇಳಿದರು.
ಈ ಸಂದರ್ಭ ಸಂಚಾಲಕ ಕೆ.ಆರ್. ಕೀರ್ತಿ ರಾಜು, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ತಾಲೂಕು ಅಧ್ಯಕ್ಷ ಮಹಾದೇವ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ತಾಲೂಕು ಅಧ್ಯಕ್ಷ ಪುನೀತ್ ರಾಜ್, ಕೆ.ಆರ್. ಸತಿ, ದುರ್ಗೇಶ್, ಸತೀಶ್ ಕುಮಾರ, ಸೂರ್ಯ, ರಾಜು, ಪುನೀತ್, ದರ್ಶನ್ ಇನ್ನಿತರರು ಹಾಜರಿದ್ದರು.