ಮಡಿಕೇರಿ, ನ. ೨ : ಕರ್ನಾಟಕ ರಾಜ್ಯ ಮಟ್ಟದ ಫೆನ್ಸಿಂಗ್ (ಕತ್ತಿವರಸೆ) ಚಾಂಪಿಯನ್‌ಶಿಪ್‌ನ ೨೦ರ ವಯೋಮಿತಿ ಒಳಗಿನ ವಿಭಾಗದಲ್ಲಿ ಕೇಚೆಟ್ಟಿರ ಡಿ. ವಿಜಯ್ ಉತ್ತಯ್ಯ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಇವರು ಸೀನಿಯರ್ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಇದೇ ಚಾಂಪಿಯನ್‌ಶಿಪ್‌ನಲ್ಲಿ ಜಿಲ್ಲೆಯ ಮತ್ತೋರ್ವ ಯುವಕ ಕೊಡಂದೇರ ಪಿ. ಅಯ್ಯಪ್ಪ ಅವರು ಅಂಡರ್ ೨೦ ಹಾಗೂ ಸೀನಿಯರ್ ವಿಭಾಗದಲ್ಲಿ ಕಂಚಿನ ಪದಕಗಳನ್ನು ಪಡೆದಿದ್ದಾರೆ.

ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಇತ್ತೀಚೆಗೆ ನಡೆದ ಪಂದ್ಯಾಟದಲ್ಲಿ ಇವರಿಬ್ಬರೂ ಈ ಸಾಧನೆ ಮಾಡಿದ್ದು, ಈ ತಿಂಗಳು ಹರಿಯಾಣದ ಸೋನಿಪತ್‌ನಲ್ಲಿ ನಡೆಯುವ ರಾಷ್ಟಿçÃಯ ಮಟ್ಟದ ಚಾಂಪಿಯನ್‌ಶಿಪ್‌ನಲ್ಲಿ ಹಾಗೂ ಡಿಸೆಂಬರ್ ತಿಂಗಳಲ್ಲಿ ಪಂಜಾಬ್‌ನ ಅಮೃತ್‌ಸರ್‌ನಲ್ಲಿ ನಡೆಯುವ ಸೀನಿಯರ್ ವಿಭಾಗದ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಬೆಂಗಳೂರಿನ ಸಂತ ಜೋಸೆಫರ ಕಾಲೇಜಿನಲ್ಲಿ ಬಿ.ಕಾಮ್ ವ್ಯಾಸಂಗ ಮಾಡುತ್ತಿರುವ ವಿಜಯ್ ಉತ್ತಯ್ಯ ಕಡಗದಾಳು ನಿವಾಸಿ ಕೇಚೆಟ್ಟಿರ ರವಿ ದೇವಯ್ಯ ಹಾಗೂ ರೇಶ್ಮಾ ದೇವಯ್ಯ (ತಾಮನೆ ಬೊಳ್ಳಂಡ) ಅವರ ಪುತ್ರ.

ಬೆಂಗಳೂರು ಬೆತಾನಿ ಜೂನಿಯರ್ ಕಾಲೇಜಿನಲ್ಲಿ ೧೨ನೇ ತರಗತಿ ವ್ಯಾಸಂಗ ಮಾಡುತ್ತಿರುವ ಅಯ್ಯಪ್ಪ ಕೊಡಂದೇರ ಪೂವಣ್ಣ ಹಾಗೂ ಸರಿತಾ (ತಾಮನೆ ಕುಟ್ಟಂಡ) ದಂಪತಿಯ ಪುತ್ರ.