*ಸಿದ್ದಾಪುರ, ನ. ೨: ತ್ಯಾಗತ್ತೂರು ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಬೆಳೆಗಾರ ಹಾಗೂ ಗ್ರಾ.ಪಂ. ಸದಸ್ಯ ಮನುಮಹೇಶ್ ಅವರ ಕಾಫಿ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು ಸಾಕಷ್ಟು ಹಾನಿ ಮಾಡಿದೆ.

ನೀಲಗಿರಿ ಮರಗಳನ್ನು ನೆಲಕ್ಕುರುಳಿಸಿವೆ, ಕಾವೇರಿ ನದಿ ಬಳಿ ಆನೆಗಳ ದಾಳಿಯನ್ನು ತಡೆಯಲು ಅಳವಡಿಸಿರುವ ರೈಲ್ವೇ ಕಂಬಿಯ ಬೇಲಿಯನ್ನು ಜಖಂಗೊಳಿಸಿದೆ.

ತೋಟಕ್ಕೆ ಆಗಿರುವ ಹಾನಿಗೆ ಅರಣ್ಯ ಇಲಾಖೆ ಪರಿಹಾರ ನೀಡಬೇಕೆಂದು ಮನುಮಹೇಶ್ ಒತ್ತಾಯಿಸಿದ್ದಾರೆ. ರೈಲ್ವೆ ಕಂಬಿಗಳ ಬೇಲಿ ಆನೆಗಳನ್ನು ತಡೆಯುವಲ್ಲಿ ವಿಫಲವಾಗಿದ್ದು, ಸೋಲಾರ್ ಬೇಲಿಯನ್ನು ನಿರ್ಮಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಹವಾಗುಣ ವೈಪರಿತ್ಯದೊಂದಿಗೆ ಕಾಡಾನೆಗಳ ಹಾವಳಿಯೂ ಮಿತಿ ಮೀರಿದ್ದು, ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

-ಸುಧಿ