ಪೆರಾಜೆ, ಅ. ೩೧: ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೦-೨೧ನೇ ಸಾಲಿನ ಮಹಾಸಭೆಯು ಪೆರಾಜೆ ಅನ್ನಪೂರ್ಣೇಶ್ವರಿ ಕಲಾಮಂದಿರದಲ್ಲಿ ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ವರದಿ ಸಾಲಿನಲ್ಲಿ ೨೩.೩೦ ಲಕ್ಷ ಲಾಭವಿದ್ದು. ಸದಸ್ಯರಿಗೆ ಶೇ. ೬ ಡಿವಿಡೆಂಡ್ ಹಂಚುವAತೆ ತೀರ್ಮಾನಿಸಲಾಗಿದೆ. ಸದಸ್ಯರು ಕೃಷಿ ಚಟುವಟಿಕೆಗಳಿಗೆ ಅಂದರೆ ಸಾಲ ವ್ಯವಹಾರ, ಬೆಳೆದ ಉತ್ಪತ್ತಿಗಳನ್ನು ಮಾರಾಟ ಮಾಡುವುದು ಇತ್ಯಾದಿ ಎಲ್ಲ ಚಟುವಟಿಕೆಗಳನ್ನು ಸಹಕಾರ ಸಂಘಗಳ ಮುಖಾಂತರವೇ ಮಾಡುವುದರಿಂದ ಸಹಕಾರ ಸಂಘಗಳ ಲಾಭದಲ್ಲಿ ಸದಸ್ಯರು ಪಾಲುದಾರರು ಆಗುತ್ತಾರೆ. ಕೃಷಿಭೂಮಿಯ ಫಲವತ್ತತೆಯನ್ನು ಕಾಪಾಡಲು ವೈಜ್ಞಾನಿಕವಾಗಿ ಮಣ್ಣು ಪರೀಕ್ಷೆ ಮಾಡಿ ಕೊರತೆಯಿರುವ ಅಥವಾ ಶಿಫಾರಸ್ಸು ಮಾಡಿದ ರಸಗೊಬ್ಬರ ಮಾತ್ರ ಬಳಸಿ ಕೃಷಿಯಲ್ಲಿ ಅಧಿಕ ಇಳುವರಿ ಪಡೆಯುವಲ್ಲಿ ಸದಸ್ಯರು ಆಸಕ್ತಿ ತೋರಬೇಕಾಗಿದೆ.

ಸಂಘವು ೩೪ ಕೋಟಿಗೂ ಮಿಕ್ಕಿ ವಾರ್ಷಿಕ ವ್ಯವಹಾರ ನಡೆಸಿದೆ. ಪ್ರಸ್ತುತ ೧೬೨೨ ಜನ ಸದಸ್ಯರಿದ್ದು ೯೬೭.೪ ಲಕ್ಷ ಠೇವಣಿ ಹೊಂದಿದೆ. ೧೫೯೦.೪೭ ಲಕ್ಷಗಳ ವಿವಿಧ ಸಾಲಗಳನ್ನು ವಿತರಿಸಲಾಗಿದೆ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಮೊದಲಿಗೆ ಯತೀಶ್ ಕುಮಾರ ಪಿ.ಯು ಪ್ರಾರ್ಥಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಕೇಶ್ ಹೆಚ್.ಕೆ. ಇವರು ಸ್ವಾಗತಿಸಿ, ಸಂಘದ ಉಪಾಧ್ಯಕ್ಷರಾದ ಅಶೋಕ ಪಿ.ಎಂ, ನಿರ್ದೇಶಕರಾದ ಮೋಣಪ್ಪ ನಿಡ್ಯಮಲೆ, ಪ್ರಸನ್ನ ನೆಕ್ಕಿಲ, ಗಾಂಧಿ ಪ್ರಸಾದ್ ಬಂಗಾರಕೋಡಿ, ದೀನರಾಜ್ ದೊಡ್ಡಡ್ಕ, ಜಯರಾಮ ಪಿ.ಟಿ, ಶೇಷಪ್ಪ ಎನ್.ವಿ, ಪ್ರಮೀಳಾ ಎನ್. ಬಂಗಾರ ಕೋಡಿ, ರೇಣುಕಾ ಕುಂದಲ್ಪಾಡಿ, ಉದಯಕುಮಾರ ಪಿ.ಎ. ದಾಸಪ್ಪ ಮಡಿವಾಳ, ಕಿರಣ ಬಂಗಾರಕೊಡಿ, ಆಂತರಿಕ ಲೆಕ್ಕ ಪರಿಶೋಧಕರಾದ ರತ್ನಾಕರ ಗೌಡ ಬಳ್ಳಡ್ಕ, ಜಿಲ್ಲಾ ಬ್ಯಾಂಕಿನ ಮೇಲ್ವಿಚಾರಕರಾದ ಉದಯಕುಮಾರ ಕೆ.ಎ. ಉಪಸ್ಥಿತರಿದ್ದರು.

ನಿರ್ದೇಶಕರಾದ ಪ್ರಮೀಳಾ ಎನ್ ಬಂಗಾರಕೋಡಿ ವಂದಿಸಿದರು.