ಸಂಪಾಜೆ, ಅ. ೩೧: ಚೆಂಬು ಗ್ರಾಮ ದಬ್ಬಡ್ಕ ವಾರ್ಡಿನ ಆನ್ಯಾಳ ಎಸ್.ಸಿ. ಕಾಲೋನಿಗೆ ಹೋಗುವ ಕಾಂಕ್ರಿಟ್ ರಸ್ತೆಯ ಸುಮಾರು ೭ ಮೀಟರ್‌ನಷ್ಟು ಭಾಗ ಸಂಪೂರ್ಣ ಹದಗೆಟ್ಟಿದ್ದು ವಾಹನ ಸವಾರರಿಗೆ ಅತ್ಯಂತ ದುಸ್ತರ ಹಾಗೂ ಚಲಿಸಲು ಅಸಾಧ್ಯವಾಗಿತ್ತು.

ಸ್ಥಳೀಯರು ಇದರ ಬಗ್ಗೆ ಚೆಂಬು ವಲಯ ಕಾಂಗ್ರೆಸ್ ಮುಖಂಡರಿಗೆ ಮನವಿ ಮಾಡಿದಾಗ, ವಲಯ ಕಾಂಗ್ರೆಸ್ ಅಧ್ಯಕ್ಷ ರವಿರಾಜ್ ಹೊಸೂರು ಅವರು ಈ ಬಗ್ಗೆ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಅವರ ಮೂಲಕ ಕೆಪಿಸಿಸಿ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಎಸ್ ಪೊನ್ನಣ್ಣ ಅವರಿಗೆ ಮಾಹಿತಿ ನೀಡಿದರು. ಇದಕ್ಕೆ ಕೂಡಲೇ ಸ್ಪಂದಿಸಿದ ಮುಖಂಡರು, ಪಕ್ಷದ ವತಿಯಿಂದ ಖರ್ಚನ್ನು ಭರಿಸಿ ಹದಗೆಟ್ಟಿದ್ದ ರಸ್ತೆಯನ್ನು ಶ್ರಮದಾನದ ಮೂಲಕ ಕೂಡಲೇ ಕಾಂಕ್ರಿಟಿಕರಣ ಮಾಡಿ ಚಲಿಸಲು ಯೋಗ್ಯ ಗೊಳಿಸಲಾಯಿತು.

ಕಾಂಕ್ರಿಟಿಕರಣ ಮಾಡುವ ಸಂದರ್ಭ ಚೆಂಬು ಪಂಚಾಯಿತಿ ಅಧ್ಯಕ್ಷೆ ಕುಸುಮಾ ಯೋಗೀಶ್ವರ್, ಉಪಾಧ್ಯಕ್ಷೆ ಶಶಿಕಲಾ, ಸದಸ್ಯರುಗಳಾದ ಆದಮ್, ಗಿರೀಶ್ ಹೊಸೂರ್, ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಸೂರಜ್ ಹೊಸೂರು, ಹಿರಿಯ ಕಾಂಗ್ರೆಸ್ಸಿಗ ಬಾಲಂಬಿ ಸೋಮಣ್ಣ, ರಘುನಾಥ್ ಬಿ, ವಲಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾರತಿ, ಏಣಿಯಾರ ಮನು, ಜೇವಿಯರ್, ಜೇಮ್ಸ್, ಹರ್ಷಿತ್ ಕನ್ಯಾಣ, ತೆಂಕಿಲ ದೀಕ್ಷಿತ್, ನಿವಾಸಿಗಳಾದ ಚಂದ್ರಪ್ಪ, ರವಿ, ನಯನ ಕಾಡುಪಂಜ, ಬಾಲಕೃಷ್ಣ, ಚಿದಾನಂದ ಹಾಗೂ ಇತರರು ಭಾಗವಹಿಸಿದ್ದರು. ಜಿ.ವಿ ಗಣಪಯ್ಯ ಮಾರ್ಗದರ್ಶನ ನೀಡಿದರು.