ನಾಪೋಕ್ಲು, ನ. ೧: ಪಡಿತರ ಚೀಟಿಗೆ ಬೆರಳಚ್ಚು ನೀಡಲು ನಿಗದಿ ಮಾಡಿದ ದಿನಾಂಕವನ್ನು ಮುಂದೂಡುವAತೆ ನಾಪೋಕ್ಲು ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಪರವಂಡ ಸಿರಾಜ್ ಮತ್ತು ಪದಾಧಿಕಾರಿಗಳು ಮಡಿಕೇರಿ ತಾಲೂಕು ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.

ಕೊಡಗು ಜಿಲ್ಲೆ ಗುಡ್ಡಗಾಡುವಿನಿಂದ ಕೂಡಿದ ಹಳ್ಳಿ ಪ್ರದೇಶವಾಗಿದೆ. ಪ್ರತಿನಿತ್ಯ ಇಲ್ಲಿ ವಿದ್ಯುತ್ ಮತ್ತು ನೆಟ್‌ವರ್ಕ್ ಸಮಸ್ಯೆ ಎದುರಾಗುತ್ತಿದೆ. ಇದರಿಂದ ಬಹುತೇಕ ಜನರ ಬೆರಳಚ್ಚು ನೀಡಲು ಇನ್ನೂ ಸಾಧ್ಯವಾಗಿಲ್ಲ. ಆದುದರಿಂದ ಬೆರಳಚ್ಚು ನೀಡಲು ನಿಗದಿಗೊಳಿಸಿದ ದಿನಾಂಕವನ್ನು ಮುಂದೂಡಬೇಕೆAದು ಅವರು ಒತ್ತಾಯಿಸಿದ್ದಾರೆ.