ಎಲ್ಲಿ ಭಾಷೆ ಸದೃಢವಾಗಿರುತ್ತದೆಯೋ ಅಲ್ಲಿ ರಾಜ್ಯ ಶಕ್ತಿಶಾಲಿಯಾಗಿರುತ್ತದೆ: ಸಿಎಂ ಬೊಮ್ಮಾಯಿ

ಬೆಂಗಳೂರು, ನ. ೧: ಎಲ್ಲಿ ಭಾಷೆ ಸದೃಢವಾಗಿರುತ್ತದೆಯೋ ಅಲ್ಲಿ ರಾಜ್ಯ ಶಕ್ತಿಶಾಲಿಯಾಗಿರುತ್ತದೆ. ಕನ್ನಡ ಸಾಹಿತ್ಯವನ್ನು ಇಡೀ ದೇಶಕ್ಕೆ ಮುಟ್ಟಿಸಬೇಕು. ಕನ್ನಡ ಭಾಷೆ ತಿಳಿಯದವರಿಗೆ ಕನ್ನಡ ಭಾಷೆ ಕಲಿಸಬೇಕು. ಕನ್ನಡಿಗರಿಗೆ ಉದ್ಯೋಗ ಕೊಡಿಸುವ ಕೆಲಸ ಮಾಡಬೇಕು. ಆಗ ಮಾತ್ರ ಕರ್ನಾಟಕ ಮತ್ತು ಕನ್ನಡ ಅಭಿವೃದ್ಧಿಯಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸಾರ್ವಜನಿಕ ಇಲಾಖೆಯು ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ೬೬ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿರುವ ಅವರು, ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿAದ ಆಚರಿಸಬೇಕು. ಕನ್ನಡಿಗರು ಪ್ರತಿದಿನವೂ ಕನ್ನಡದಲ್ಲೇ ಮಾತನಾಡಬೇಕು. ಕನ್ನಡ ನಮ್ಮೆಲ್ಲರನ್ನೂ ಒಗ್ಗೂಡಿಸಿದೆ. ಕನ್ನಡ ನಮ್ಮ ದೇವರು. ಕನ್ನಡವೆಂಬ ತಾಯಿ ದೇವರನ್ನು ಸಂರಕ್ಷಿಸಬೇಕು. ಕನ್ನಡವನ್ನು ಬೃಹತ್ ಹೆಮ್ಮರವಾಗಿ ಬೆಳಸಬೇಕು. ಭಾಷೆ ಸದೃಢವಾಗಿದ್ದರೆ ಆ ರಾಜ್ಯ ಶಕ್ತಿಶಾಲಿಯಾಗಿರುತ್ತದೆ. ಭಾರತದಲ್ಲಿ ಅತ್ಯಂತ ಪುರಾತನವಾದ ಭಾಷೆ ಕನ್ನಡ. ಕನ್ನಡ ಸಿಂಧೂ ನಾಗರಿಕತೆಗೂ ಮೊದಲು ಬಳಕೆಯಲ್ಲಿದ್ದ ಭಾಷೆ. ಸಹಸ್ರಾರು ವರ್ಷಗಳಿಂದ ಬಳಕೆಯಲ್ಲಿರುವ ಕನ್ನಡದ ಶಕ್ತಿ ಕಸಿಯಲು ಸೂರ್ಯ, ಚಂದ್ರರು ಇರುವವರೆಗೂ ಅಸಾಧ್ಯ ಎಂದು ಹೇಳಿದರು.

ಅಕ್ಟೋಬರ್‌ನಲ್ಲಿ ೧.೩೦ ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ

ನವದೆಹಲಿ, ನ. ೧: ಕೋವಿಡ್ ನಂತರ ಸತತ ನಾಲ್ಕನೇ ತಿಂಗಳು ಭಾರತದ ಸರಕು ಮತ್ತು ಸೇವಾ ತೆರಿಗೆ ಸಂಗ್ರಹ ೧ ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಾಗಿದ್ದು, ಅಕ್ಟೋಬರ್ ತಿಂಗಳಲ್ಲಿ ೧.೩೦ ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿದೆ. ಇದು ಜುಲೈ ೨೦೧೭ ರಲ್ಲಿ ಜಿಎಸ್‌ಟಿ ಜಾರಿಗೆ ಬಂದ ನಂತರ ಸಂಗ್ರಹವಾದ ಎರಡನೇ ಅತಿ ಹೆಚ್ಚು ತೆರಿಯಾಗಿದ್ದು, ಇದು ಕೋವಿಡ್ ಸಾಂಕ್ರಾಮಿಕ ಮತ್ತು ಹಬ್ಬದ ಬೇಡಿಕೆಯ ಪರಿಣಾಮದಿಂದ ಆರ್ಥಿಕ ಚೇತರಿಕೆಯನ್ನು ಸೂಚಿಸುತ್ತದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ. ೨೦೨೧ರ ಏಪ್ರಿಲ್‌ನಲ್ಲಿ ಗರಿಷ್ಠ ೧.೪೧ ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹವಾಗಿತ್ತು. ಕಳೆದ ಸೆಪ್ಟೆಂಬರ್‌ನಲ್ಲಿ ೧.೧೭ ಲಕ್ಷ ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹವಾಗಿತ್ತು. ಕಳೆದ ತಿಂಗಳು ಮಾರಾಟವಾದ ಸರಕುಗಳು ಮತ್ತು ಸಲ್ಲಿಸಿದ ಸೇವೆಗಳ ಮೇಲಿನ ತೆರಿಗೆ ಸಂಗ್ರಹಗಳು ಅಕ್ಟೋಬರ್ ೨೦೨೦ ಕ್ಕಿಂತ ಶೇ. ೨೪ ರಷ್ಟು ಹೆಚ್ಚಾಗಿದೆ ಮತ್ತು ೨೦೧೯-೨೦ ಕ್ಕಿಂತ ಶೇ. ೩೬ ರಷ್ಟು ಹೆಚ್ಚಾಗಿದೆ. ಅಕ್ಟೋಬರ್ ೨೦೨೧ ರಲ್ಲಿ ಒಟ್ಟು ಜಿಎಸ್‌ಟಿ ಆದಾಯವು ೧,೩೦,೧೨೭ ಕೋಟಿ ರೂಪಾಯಿ ಸಂಗ್ರಹವಾಗಿದ್ದು, ಇದರಲ್ಲಿ ಸಿಜಿಎಸ್‌ಟಿ ೨೩,೮೬೧ ಕೋಟಿ ರೂಪಾಯಿ, ಎಸ್‌ಜಿಎಸ್‌ಟಿ ೩೦,೪೨೧ ಕೋಟಿ ರೂಪಾಯಿ, ಐಜಿಎಸ್‌ಟಿ ೬೭,೩೬೧ ಕೋಟಿ ರೂಪಾಯಿ (೩೨,೯೯೮ ಕೋಟಿ ರೂಪಾಯಿಗಳನ್ನು ಒಳಗೊಂಡAತೆ) ಮತ್ತು ಸರಕು ಆಮದು ೮,೪೮೪ ಕೋಟಿ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ ೬೯೯ ಕೋಟಿ ಸೇರಿದಂತೆ) ಎಂದು ಕೇಂದ್ರ ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಜಾಗತಿಕ ಪ್ರಾಮುಖ್ಯತೆಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಶೃಂಗಸಭೆ ಫಲಪ್ರದ

ರೋಮ್, ನ. ೧: ರೋಮ್‌ನಲ್ಲಿ ನಡೆದ ಎರಡು ದಿನಗಳ ಜಿ-೨೦ ಶೃಂಗಸಭೆ ಫಲಪ್ರದವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಬಣ್ಣಿಸಿದ್ದಾರೆ. ರೋಮ್‌ನಲ್ಲಿ ನಡೆದ ಜಿ-೨೦ ರಾಷ್ಟçಗಳ ಶೃಂಗಸಭೆ ಫಲಪ್ರದವಾಗಿದೆ. ಈ ಶೃಂಗಸಭೆಯ ನಂತರ ನಾವು ಗ್ಲಾಸ್ಗೊಗೆ ಹೊರಟಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ. ಶೃಂಗಸಭೆಯಲ್ಲಿ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವುದು, ಆರೋಗ್ಯ ಮೂಲಸೌಕರ್ಯವನ್ನು ಸುಧಾರಿಸುವುದು, ಆರ್ಥಿಕ ಸಹಕಾರವನ್ನು ಹೆಚ್ಚಿಸುವುದು ಮತ್ತು ಆವಿಷ್ಕಾರದತ್ತ ಗಮನಹರಿಸುವುದು ಸೇರಿದಂತೆ ಜಾಗತಿಕ ಪ್ರಾಮುಖ್ಯತೆಯ ಹಲವು ವಿಷಯಗಳ ಕುರಿತು ವಿಶ್ವ ನಾಯಕರು ವಿಸ್ತೃತವಾದ ಚರ್ಚೆ ನಡೆಸಿದ್ದಾರೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಜಿ೨೦ ಸಮಿತಿಯ ನಾಯಕರು ಎರಡು ದಿನಗಳ ಶೃಂಗಸಭೆಯಲ್ಲಿ ಪ್ರಕಟಿಸಲಾದ ರೋಮ್ ಘೋಷಣೆಯನ್ನು ಅಳವಡಿಸಿಕೊಳ್ಳಲು ಒಪ್ಪಿಗೆ ಸೂಚಿಸಿದರು. ಮಾತ್ರವಲ್ಲ, ಕೋವಿಡ್-೧೯ ವಿರುದ್ಧ ರೋಗನಿರೋಧಕ ಶಕ್ತಿ ಹೆಚ್ಚಿಸುವುದರಿಂದ ಜಾಗತಿಕವಾಗಿ ಒಳಿತಾಗುತ್ತದೆ ಎಂದು ಒಪ್ಪಿಕೊಳ್ಳುವ ಮೂಲಕ ಆರೋಗ್ಯ ಕ್ಷೇತ್ರದಲ್ಲಿನ ಬೆಳವಣಿಗೆಗಳ ಕುರಿತು ಪರಿಣಾಮಕಾರಿ ಸಂದೇಶವನ್ನು ನೀಡಿದ್ದಾರೆ. ಇಂಧನ ಮತ್ತು ಹವಾಮಾನ ಈ ಎರಡೂ ವಿಷಯಗಳ ಬಗ್ಗೆ ಜಿ೨೦ ಶೃಂಗಸಭೆಯಲ್ಲಿ ಹೆಚ್ಚು ಚರ್ಚೆ ನಡೆಯಿತು.

ದೆಹಲಿಯಲ್ಲಿ ಪಟಾಕಿ ಮಾರಾಟ ಸಂಪೂರ್ಣ ನಿಷೇಧ

ನವದೆಹಲಿ, ನ. ೧: ದೆಹಲಿಯಲ್ಲಿ ಪಟಾಕಿ ಮಾರಾಟಕ್ಕೆ ಸಂಪೂರ್ಣ ಬ್ರೇಕ್ ಬಿದ್ದಿದೆ. ರಾಷ್ಟç ರಾಜಧಾನಿಯ ಹೊರಗೆ ಪಟಾಕಿಗಳನ್ನು ಬಳಸಲು ಬಯಸುವವರಿಗೂ ಸಹ ದೆಹಲಿಯೊಳಗೆ ಪಟಾಕಿ ಖರೀದಿ ಅಥವಾ ಮಾರಾಟಕ್ಕೆ ಅನುಮತಿಸಲಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಸೋಮವಾರ ಹೇಳಿದೆ. ಪಟಾಕಿ ವ್ಯಾಪಾರಸ್ಥರ ಬಳಿ ಇರುವ ದಾಸ್ತಾನನ್ನು ನಗರದ ಹೊರಗೆ ಹೋಗಿ ಮಾರಾಟ ಮಾಡಲು ಅಥವಾ ಹೊರ ಭಾಗದಿಂದ ನಗರಕ್ಕೆ ಬಂದು ಪಟಾಕಿ ಖರೀದಿಸಲು ಅನುಮತಿ ನೀಡಬೇಕೆಂದು ಕೋರಿ ೫೩ ಪಟಾಕಿ ತಯಾರಕರು ಹಾಗೂ ವ್ಯಾಪಾರಿಗಳು ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್, ಪಟಾಕಿ ಮಾರಾಟ ನಿಷೇಧ ಕುರಿತಂತೆ ರಾಷ್ಟಿçÃಯ ಹಸಿರು ನ್ಯಾಯ ಮಂಡಳಿ ಮತ್ತು ಸುಪ್ರೀಕೋರ್ಟ್ ಆದೇಶ ಹಾಗೂ ಮಾರ್ಗಸೂಚಿ ಪರಿಶೀಲಿಸುವುದಿಲ್ಲ ಎಂದು ವಿಚಾರಣೆ ವೇಳೆ ತಿಳಿಸಿದೆ. ಈ ಹಿನ್ನೆಲೆ ದೆಹಲಿಯಲ್ಲಿನ ಪಟಾಕಿ ದಾಸ್ತಾನನ್ನು ನಗರದ ಹೊರಭಾಗಕ್ಕೆ ಅಥವಾ ಉತ್ತಮ ಹವಾಮಾನದ ಪ್ರದೇಶದ ಖರೀದಿದಾರರು ದೆಹಲಿಗೆ ಆಗಮಿಸಿ ಪಟಾಕಿ ಕೊಂಡುಕೊಳ್ಳುವುದು ಸುಪ್ರೀಂ ಕೋರ್ಟ್ ತೀರ್ಪಿನ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಈ ವಿಚಾರದಲ್ಲಿ ಅರ್ಜಿದಾರರು ಸ್ಪಷ್ಟನೆ ಕೋರಿ ಸುಪ್ರೀಂ ಕೋರ್ಟ್ಗೆ ಹೋಗಬೇಕು ಎಂದು ಹೈಕೋರ್ಟ್ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಅರ್ಜಿದಾರರು, ಹೈಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದುಕೊAಡಿದ್ದಾರೆ.