ಸೋಮವಾರಪೇಟೆ,ಅ.೩೦: ಇಲ್ಲಿನ ವಿವಿಧೋದ್ಧೇಶ ಸಹಕಾರ ಸಂಘವು ರೂ. ೨೫ಲಕ್ಷಕ್ಕೂ ಅಧಿಕ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. ೧೮ ಲಾಭಾಂಶ ವಿತರಿಸಲು ನಿರ್ಧರಿಸಲಾಗಿದೆ ಎಂದು ಅಧ್ಯಕ್ಷ ಬಿ.ಎಂ. ರಾಮ್‌ಪ್ರಸಾದ್ ತಿಳಿಸಿದರು.
ಇಲ್ಲಿನ ಮಹಿಳಾ ಸಮಾಜದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘ ಕಳೆದ ಹಲವು ವರ್ಷಗಳಿಂದ ಉತ್ತಮ ವ್ಯವಹಾರ ಮಾಡುವ ಮೂಲಕ ಎ ದರ್ಜೆಯಲ್ಲಿ ಗುರುತಿಸಿಕೊಂಡಿದೆ ಎಂದರು.
ಕೋವಿಡ್-೧೯ನಿAದಾಗಿ ಸಂತ್ರಸ್ತಗೊAಡಿರುವ ರೋಗಿಗಳ ಅನುಕೂಲಕ್ಕಾಗಿ ಇಲ್ಲಿನ ತಾಲೂಕು ಸರ್ಕಾರಿ ಆಸ್ಪತೆಗೆ ರೂ. ೨೫ ಸಾವಿರ ಮೌಲ್ಯದ ಕುಡಿಯುವ ಬಿಸಿ ಮತ್ತು ತಣ್ಣೀರಿನ ವಾಟರ್ ಪ್ಯೂರಿಫೈರ್ ಯಂತ್ರವನ್ನು ನೀಡಲಾಗಿದೆ.
ಸಂಘದ ಸದಸ್ಯರಿಗೆ ನಿವೇಶನದ ಮೇಲಿನ ಸಾಲದ ಬಡ್ಡಿಯನ್ನು ಶೇ.೧೨ರಿಂದ ೧೧ಕ್ಕೆ ಇಳಿಸಲಾಗಿದೆ. ವ್ಯಾಪಾರೋದ್ಯಮ ಸಾಲದ ಮೇಲಿನ ಬಡ್ಡಿಯನ್ನು ಶೇ. ೧೩ರಿಂದ ೧೨ಕ್ಕೆ ಇಳಿಸಲಾಗಿದೆ. ಸದಸ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಸAಘವು ಉತ್ತಮ ಆಡಳಿತ ನೀಡುವುದರೊಂದಿಗೆ ಹೆಚ್ಚಿನ ಲಾಭಗಳಿಸಲು ಸದಸ್ಯರ ಸಹಕಾರ ಪ್ರಮುಖವಾಗಿದೆ. ಎಲ್ಲ ಸದಸ್ಯರು ಸಂಘದಲ್ಲಿ ವ್ಯವಹಾರ ಮಾಡುವ ಮೂಲಕ ಸಹಕರಿಸಬೇಕೆಂದು ಅಧ್ಯಕ್ಷರು ಮನವಿ ಮಾಡಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಎಂ. ಶ್ರೀಕಾಂತ್, ಸದಸ್ಯರಾದ ಎಚ್.ಕೆ. ಮಾದಪ್ಪ, ಬಿ.ಪಿ. ಶಿವಕುಮಾರ್, ಬಿ.ಡಿ. ಮಂಜುನಾಥ್, ಎಂ.ಸಿ. ರಾಘವ, ವರಲಕ್ಷಿö್ಮÃ ಸಿದ್ಧೇಶ್ವರ್, ಬಿ.ಆರ್. ಮೃತ್ಯುಂಜಯ, ಶೋಭಾ ಶಿವರಾಜ್, ಎಚ್.ಎಸ್. ವೆಂಕಪ್ಪ, ಬಿ. ಶಿವಪ್ಪ, ಕೆ.ಬಿ. ಸುರೇಶ್, ಎನ್.ಟಿ. ಪರಮೇಶ್, ಕೆ.ಆರ್. ದಿವ್ಯ ಹಾಗೂ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಬಿ. ತಾರಾ ಇದ್ದರು.